Ticker

6/recent/ticker-posts

Ad Code

ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದ ವಾಚನಾ ಕಳರಿಯಲ್ಲಿ ಮಕ್ಕಳ ಆರ್ಟ್ ಫೆಸ್ಟ್

 

ಪೆರ್ಲ : ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ವಾಚನಾ ಕಳರಿ ಕಾರ್ಯಕ್ರಮದಂಗವಾಗಿ  ಮಕ್ಕಳ ಆರ್ಟ್ ಫೆಸ್ಟ್  ಜರುಗಿತು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲು ಉದ್ಘಾಟಿಸಿ 'ಬೆಳೆಯುತ್ತಿರುವ ಮಕ್ಕಳು ಕಲಾ ಪ್ರೌಢಿಮೆಯೊಂದಿಗೆ ಸಾಗಿದರೆ ಮುಂದೆ ದೊಡ್ಡ ಸಾಧಕರಾಗುತ್ತಾರೆ. ಸೃಜನಾತ್ಮಕ ಬೆಳವಣಿಗೆ ಅತೀ ಮುಖ್ಯವಾಗಿದೆ ' ಎಂದು ವಾಚನಾ ಕಳರಿ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿ ಯಶಸ್ವಿಗೊಳಿಸುವ ಗ್ರಂಥಾಲಯವನ್ನು ಅಭಿನಂದಿಸುತ್ತಾ ಮಾತಾನಾಡಿದರು

ಎಣ್ಮಕಜೆ ಪಂಚಾಯತ್ ಸದಸ್ಯೆ ಸೌದಾಬಿ ಹನೀಫ್ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಗಣೇಶ್ ಆಚಾರ್ಯ ಅಡ್ಯನಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮಕ್ಕಳು ಚಿತ್ರ ರಚನಾ ಕಮ್ಮಟದಲ್ಲಿ ತರಬೇತಿ ಪಡೆದು ಚಿತ್ರಗಳನ್ನು ರಚಿಸಿ, ಆರ್ಟ್ ಫೆಸ್ಟ್ ನಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದರು. 

ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಉದಯ ಸಾರಂಗ್ ನಿರ್ವಹಿಸಿದರು.

Post a Comment

0 Comments