Ticker

6/recent/ticker-posts

Ad Code

ಪುದುಚೇರಿಯ ಮುಖ್ಯಮಂತ್ರಿಯಾಗಿ ಎನ್. ರಂಗಸ್ವಾಮಿ ಪ್ರಮಾಣ ವಚನ ಸ್ವೀಕಾರ

 

ಪುದುಚೇರಿ : ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಎನ್. ರಂಗಸ್ವಾಮಿ ಬುಧವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.   ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಂಗಸ್ವಾಮಿ ಜೊತೆಗೆ ಬಿಜೆಪಿ ಶಾಸಕ ಎ ನಮಸ್ಸಿವಾಯಂ ಮತ್ತು ಎ. ಐ. ಎನ್. ಆರ್. ಸಿ ಶಾಸಕ ಎ. ಮಲ್ಲಾಡಿ ಕೃಷ್ಣ ರಾವ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಸನಾಥನ್ ಮುಖ್ಯಮಂತ್ರಿ ಮತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ರಂಗಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಇದು ಐದನೇ ಬಾರಿಯ ದಾಖಲೆಯಾಗಿದೆ. ಅವರು ಸತತ ಎರಡನೇ ಬಾರಿಗೆ ಎನ್  ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಪುದುಚೇರಿ ವಿಧಾನಸಭೆಯಲ್ಲಿ, ರಂಗಸ್ವಾಮಿ ಅವರ ಅಖಿಲ ಭಾರತ ಎನ್. ಆರ್. ಕಾಂಗ್ರೆಸ್ 12 ಎಂಎಲ್ ಎ,  ಬಿಜೆಪಿ ನಾಲ್ಕು ಎಂಎಲ್ಎ, ಎಎಡಿಎಂಕೆ ಮತ್ತು ಲಾಚಿಯಾ ಜನನಾಯಕ ಕಚ್ಚಿ ತಲಾ ಒಬ್ಬ ಸದಸ್ಯರನ್ನು ಹೊಂದಿದ್ದಾರೆ. ನಂತರ ಮೂವರು ಸದಸ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು.

ಮುಖ್ಯಮಂತ್ರಿ ಮತ್ತು ಸಚಿವರನ್ನು ನೇಮಿಸುವ ಮೊದಲು, ಮುಖ್ಯ ಕಾರ್ಯದರ್ಶಿ ರಂಗಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಎ ನಮಸ್ಸಿವಾಯಂ ಮತ್ತು ಮಲ್ಲಾಡಿ ಕೃಷ್ಣ ರಾವ್ ಅವರನ್ನು ಕೇಂದ್ರ ಸರ್ಕಾರ ಸಚಿವರನ್ನಾಗಿ ನೇಮಿಸುವ ಅಧಿಸೂಚನೆಯನ್ನು ಓದಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ, ಮುಖ್ಯಮಂತ್ರಿ ಮತ್ತು ಸಚಿವರನ್ನು ಲೆಫ್ಟಿನೆಂಟ್ ಗವರ್ನರ್ ಮತ್ತು ಮುಖ್ಯ ಕಾರ್ಯದರ್ಶಿ ಶರದ್ ಚೌಹಾಣ್ ಸನ್ಮಾನಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ಪುದುಚೇರಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನ, ಬಿಜೆಪಿ ರಾಜ್ಯಾಧ್ಯಕ್ಷ ವಿ.ಪಿ. ರಾಮಲಿಂಗಂ, ಮಾಜಿ ಎಂ.ಎಲ್.ಎಂ. ಡಿಎಂಕೆ ಸಂಚಾಲಕ ಆರ್. ಶಿವ ಮತ್ತು ಮಾಜಿ ಸ್ಪೀಕರ್ ಆರ್. ಸೆಲ್ವಂ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments