Ticker

6/recent/ticker-posts

Ad Code

ಪೆರಡಾಲ ಕ್ಷೇತ್ರಕ್ಕೆ ಶೃಂಗೇರಿ ಶ್ರೀ ಶ್ರೀ ವಿಧು ಶೇಖರ ಭಾರತೀ ಶ್ರೀಪಾದಂಗಳವರ ಭೇಟಿ

 

ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ  ಕರಕಮಲ ಸಂಜಾತರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧು ಶೇಖರ ಭಾರತೀ ಶ್ರೀಪಾದಂಗಳವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ  ಆಡಳಿತ ಮಂಡಳಿಯ ಸದಸ್ಯರು, ಎಲ್ಲಾ ಸಮಿತಿಯ ಸದಸ್ಯರು, ಭಕ್ತರು,  ವೇದ ಘೋಷ ಸಹಿತ ಮಹಿಳೆಯರು ಸೇರಿ ಪೂರ್ಣ ಕುಂಭ ಸ್ವಾಗತವನ್ನು ನಡೆಸಿ  ಶ್ರೀಗಳನ್ನು ಸ್ವಾಗತಿಸಿದರು.

ರಾತ್ರಿ ಪೂಜೆಯ ಶುಭ ಮುಹೂರ್ತದಲ್ಲಿ ಪೆರಡಾಲ ಶ್ರೀ ಕ್ಷೇತ್ರಕ್ಕೆ  ಭೇಟಿ  ನೀಡಿ ಪೂಜೆ ಸಲ್ಲಿಸಿ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಕಾರ್ಯಗಳನ್ನು ತಿಳಿದು ಸಂತೋಷ ವ್ಯಕ್ತಪಡಿಸಿದರು. ಆ ಮೇಲೆ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ಹರಸಿದರು. ವೈಭವಯುತ ಉತ್ಸವಗಳು ಕಳೆದ ಬಳಿಕ ಶ್ರೀ ಗುರುಗಳ ಪಾದ ಸ್ಪರ್ಶದಿಂದ ಪೆರಡಾಲದ ಭಕ್ತರು ಕೃತಾರ್ಥರಾದರು.ಈ ಸಂದರ್ಭದಲ್ಲಿ ಕ್ಷೇತ್ರ ಆಡಳಿತ ಮೊಕ್ತೇಸರ ನ್ಯಾಯವಾದಿ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಕ್ಷೇತ್ರ ಪ್ರಧಾನ ಅರ್ಚಕ ಶಿವರಾಮ ಭಟ್ ಪೆರಡಾಲ,ಮೊಕ್ತೇಸರ ಜಗನ್ನಾಥ ರೈ ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ,ಕೋಶಾಧಿಕಾರಿ ಸೂರ್ಯ ನಾರಾಯಣ ಬಿ,ರಕ್ಷಾಧಿಕಾರಿಗಳಾದ ಗೋಪಾಲಕೃಷ್ಣ ಪೈ,ಕೃಷ್ಣಮೂರ್ತಿ ಪುದುಕ್ಕೋಳಿ, ಗಣೇಶ ಪ್ರಸಾದ್ ಕಡಪ್ಪು, ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ, ಸತೀಶ್ ಕುಮಾರ್ ಪುದ್ಯೋಡು,ಜಯಶಂಕರ್ ಪಿ.ಎಸ್,ಮಾಜಿ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ ಪೆರಡಾಲ ಗುತ್ತು ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

Post a Comment

0 Comments