ಕುಂಬಳೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕು ಜನ ಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಮಂಜುನಾಥ ಆಳ್ವ ಮಡ್ವ ಅವರನ್ನು ಆಯ್ಕೆ ಮಾಡಲಾಯಿತು. ಮಂಜೇಶ್ವರ ತಾಲೂಕು ಯೋಜನೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪದಗ್ರಹಣ ನಡೆಯಿತು.
ಪುತ್ತೂರು ವಿಭಾಗದ ನಿರ್ದೇಶಕ ಬಾಬು ನಾಯ್ಕ್, ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ ಆಚಾರ್ಯ, ಮಂಜೇಶ್ಚರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ಜನ ಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಆಶ್ವಥ್ ಪೂಜಾರಿ ಲಾಲ್ ಬಾಗ್, ಸ್ಥಾಪಕಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಹಾಲಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜಿಲ್ಲಾ ಜನಜಾಗೃತಿ ಹಾಗೂ ಮಂಜೇಶ್ವರ ತಾಲೂಕು ಸದಸ್ಯರು ಉಪಸ್ಥಿತರಿದ್ದರು.

0 Comments