Ticker

6/recent/ticker-posts

Ad Code

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸಂಪರ್ಕ : ವಡಗರದ ಯುವಕನಿಂದ ಕಾಸರಗೋಡಿನ ಯುವತಿಗೆ ವಿವಾಹ ಭರವಸೆ ನೀಡಿ ವಂಚನೆ ಕೇಸು

 

ಕಾಸರಗೋಡು : ವಿವಾಹದ ಭರವಸೆಯೊಡ್ಡಿ ನಗದು ಹಣ ಎಗರಿಸಿ ಅತ್ಯಾಚಾರ ಎಸಗಿದ ವ್ಯಕ್ತಿಯೋರ್ವನ ಮೇಲೆ ಯುವತಿಯೋರ್ವಳ  ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ   32 ವರ್ಷದ ಯುವತಿಯ ದೂರಿನ ಮೇರೆಗೆ, ಕಾಸರಗೋಡು ಮಹಿಳಾ ಪೊಲೀಸರು ವಡಗರ ಮೂಲದ ಮುಹಮ್ಮದ್ ಶಮ್ಮಾಸ್ ಎಂಬ ಯುವಕನ  ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಯುವತಿಯನ್ನು ಮುಹಮ್ಮದ್ ಶಮ್ಮಾಸ್  ಸಂಪರ್ಕಿಸಿದ್ದು  ನಂತರ, ಮದುವೆಯ ಭರವಸೆ ನೀಡಿ ಯುವತಿಯ ಕೈಯಿಂದ ಸುಮಾರು ಎಂಟೂವರೆ ಲಕ್ಷ ರೂಪಾಯಿಗಳನ್ನು ಪಡೆದಿದ್ದ ಎನ್ನಲಾಗಿದೆ. ಈ ನಡುವೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಇದಾದ ನಂತರ, ಶಮ್ಮಾಸ್ ದೂರ ಉಳಿದು ಸಂಬಂಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಕೊನೆಗೆ ಮಹಿಳೆಗೆ ತಾನು ಮೋಸ ಹೋಗಿರುವುದನ್ನು ಅರಿತುಕೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ತಿಳಿಸಲಾಗಿದೆ.

Post a Comment

0 Comments