ಕಾಸರಗೋಡು : ಚಟ್ಟಂಚಾಲ್ ಪುತ್ತರಿಯಡಕ್ಕದಲ್ಲಿರುವ ಸಿಪಿಎಂ ಉದುಮ ಪ್ರದೇಶ ಸಮಿತಿ ಕಚೇರಿಯ ಮೇಲೆ ದಾಳಿ ನಡೆಸಿ ಕಚೇರಿ ಕಾರ್ಯದರ್ಶಿ ಮತ್ತು ಕಚೇರಿಯೊಳಗಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ದೂರಿನ ಮೇರೆಗೆ ಪೊಲೀಸರು 25 ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಖಲೀಲ್, ರಫೀಕ್, ಆಶಿಕ್ ಬಾದೂರ್, ಅಲಿ, ಬಿಚಿ ಅಲಿಯಾಸ್ ಬಶೀರ್, ಕೈಸ್ ಬಾಡೂರ್, ಸಿದ್ದಿಕ್, ಸಫ್ವಾನ್ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 4 ರಂದು ಚುನಾವಣಾ ವಿಜಯೋತ್ಸವ ಆಚರಿಸಲು ಬಂದಿದ್ದ ಲೀಗ್ ಕಾರ್ಯಕರ್ತರು ಸಿಪಿಎಂ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ ಎಂಬ ದೂರಿನ ಮೇಲೆ ಈ ಪ್ರಕರಣ ದಾಖಲಾಗಿದೆ.

0 Comments