ಮಂಗಳೂರು : ಬಸ್ಸಿನಿಂದ ಬಿದ್ದು ಗಾಯಗೊಂಡ ಮಗುವನ್ನು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಬಸ್ಸಿನ ಚಾಲಕ ಮತ್ತು ನಿರ್ವಾಹಕರು ತಮ್ಮ ಬಸ್ಸಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗೆ ನೆರವಾದ ಮಾನವೀಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ನಗರದ ಮಾಸ್ಟರ್ ಬಸ್ಸಿನ ಚಾಲಕ ದಯಾನಂದ್ ಮತ್ತು ನಿರ್ವಾಹಕ ಸಂದೀಪ್ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ. 13 ಬಿ ನಂಬರ್ ಮಾಸ್ಟರ್ ಬಸ್ ಕಾವೂರಿನಿಂದ ಕುಂಜತ್ತಬೈಲ್‌ಗೆ ಸಂಚರಿಸುತ್ತಿತ್ತು. ಮರಕಡ ಜಂಕ್ಷನ್ ಬಳಿ ಎದುರಿನಿಂದ ಹೋಗುತ್ತಿದ್ದ ಬಸ್‌ನಿಂದ ತಾಯಿಯೋರ್ವರು ಮಗುವಿನೊಂದಿಗೆ ಕೆಳಗಡೆ ಬಿದ್ದಿದ್ದರು. ಅದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಕೂಡಲೇ ತಮ್ಮ ಬಸ್ಸನ್ನು ನಿಲ್ಲಿಸಿ, ಮಗು ತಾಯಿ ಬಳಿ ತೆರಳಿ ಸಂತೈಸಿ ಬಳಿಕ ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

0 Comments