ಪೆರ್ಲ : ಅಭಿವೃದ್ಧಿ ಪಥದಲ್ಲಿ ಬೆಳೆಯುತ್ತಿರುವ ಪೇಟೆ ಎಂದೇ ಗುರುತಿಸಿಕೊಳ್ಳುತ್ತಿರುವ ಉಕ್ಕಿನಡ್ಕದ ಮುಖ್ಯ ಪೇಟೆಯಲ್ಲಿ ಬಸ್ ಸ್ಟ್ಯಾಂಡ್ ಇದ್ದರೂ ಗಾಳಿ, ಮಳೆ, ಬಿಸಿಲಿಗೆ ಒಳಗಡೆ ಕುಳಿತುಕೊಳ್ಳುವಂತಿಲ್ಲ. ಸುಣ್ಣ ಬಣ್ಣ ಬಳಿದು ಅಪ್ಪಟ ಹೊಸತರಂತೆ ಗೋಚರಿಸುವ ಬಸ್ ಸ್ಟ್ಯಾಂಡ್ ನ ಸ್ಲಾಬ್ ಸಹಿತ ಕಾಂಕ್ರೀಟ್ ಫಿಲ್ಲರ್ ಗಳು ಬಿರುಕು ಬಿಟ್ಟಿದ್ದು ತುಂಡು ತುಂಡಾಗಿ ಕೆಳಗೆ ಉದುರಿ ಬೀಳಲಾರಂಬಿಸಿದೆ.
ಬದಿಯಡ್ಕ ಗ್ರಾಮ ಪಂಚಾಯತಿನ 9ನೇ ವಾರ್ಡ್ ಗೊಳಪಡುವ ಈ ಬಸ್ ತಂಗುದಾಣ ಜನ ಆಶ್ರಯಕ್ಕೆ ಮುಖ್ಯ ಕಾರಣವಾಗಬೇಕಿದ್ದರೂ ಇದೀಗ ಇಲ್ಲೆ ಸಮೀಪದ ಆಟೋಟ್ಯಾಕ್ಸಿಗಳಿರುವ ಮರದ ಬಳಿ ಬಸ್ ಗಳು ನಿಲ್ಲುವ ಕಾರಣ ಹೆಚ್ಚಿನ ಜನ ಬಸ್ಟೆಂಡ್ ಬಿಟ್ಟು ಮರಗಳ ಅಡಿಯಲ್ಲೋ ಸಮೀಪದ ಅಂಗಡಿ, ಗೂಡಂಗಡಿಗಳಲ್ಲೋ ಆಶ್ರಯ ಪಡೆಯುವಂತಾಗಿದೆ. ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ ಈ ಬಸ್ ನಿಲ್ದಾಣ ಇದೀಗ ಅಲ್ಲಲ್ಲಿ ಮುರಿದು ಬೀಳತೊಡಗಿದ್ದು ಜನ ಆಶ್ರಯ ಪಡೆಯದಂತಾಗಿದೆ.
ಗಾಳಿ ಮಳೆಗೆ ಇದು ಪೂರ್ಣ ಧರಶಾಹಿಯಾಗುವ ಭೀತಿ ಎದುರಿಸುತ್ತಿದ್ದು ಇದೀಗ ಸ್ಥಳೀಯರು ಮುಂಜಾಗ್ರತ ಕ್ರಮವಾಗಿ ಬಸ್ಟೆಂಡಿನ ಸುತ್ತಲೂ ರಿಬ್ಬನ್ ಕಟ್ಟಿ ಇಟ್ಟಿದ್ದಾರೆ.
ಕಾಸರಗೋಡು ಮೆಡಿಕಲ್ ಕಾಲೇಜು ಸಹಿತ ಇನ್ನಿತರ ಪ್ರಮುಖ ಪಟ್ಟಣವಾಗಿ ಬೆಳೆಯುತ್ತಿರುವ ಉಕ್ಕಿನಡ್ಕ ಅತ್ತ ಕರ್ನಾಟಕದ ವಿಟ್ಲ ಪುತ್ತೂರು,ಇತ್ತ ಕಾಸರಗೋಡು ಭಾಗಕ್ಕೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಪ್ರದೇಶವಾಗಿದೆ. ಇಲ್ಲಿಗೊಂದು ಸೂಕ್ತ ಬಸ್ಸು ತಂಗುದಾಣ ಅಗತ್ಯವಾಗಿದ್ದು ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

.jpeg)
.jpeg)
0 Comments