ಪೆರ್ಲ : ಕುರೆಡ್ಕದ ಕೆ.ಪಿ.ಮದನ ಮಾಸ್ಟರ್ ಸ್ಮಾರಕ ಗ್ರಂಥಾಲಯದಲ್ಲಿ ಬಾಲವೇದಿ ಆಯೋಜಿಸಲಾಗಿದ್ದ ಬಾಲವೇದಿ ಮಕ್ಕಳ ವಾಚನ ಕಳರಿ ಶಿಬಿರದ ಸಮಾರೋಪ ಇಂದು ಬೆಳಗ್ಗೆ 10 ಗಂಟೆಗೆ ಜರಗಲಿದೆ.ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಬಶೀರ್ ಕೋಟ್ಟುಡಲ್ ಕಾರ್ಯಕ್ರಮ ಉದ್ಘಾಟಿಸುವರು.
ಗ್ರಂಥಾಲಯ ಸಮಿತಿ ಅಧ್ಯಕ್ಷ ಹರೀಶ್ ಸೇರಾಜೆ ಅಧ್ಯಕ್ಷತೆವಹಿಸುವರು.ಗೋವಿಂದ ಪೈ ಸ್ವಾರಕ ಸರಕಾರಿ ಕಾಲೇಜು ಮಂಜೇಶ್ವರದ ಪ್ರಾಂಶುಪಾಲ ಪ್ರೊ ಡಾ. ಮುಹಮ್ಮದ್ ಅಲಿಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಎಣ್ಮಕಜೆ ಪಂ.ಸದಸ್ಯೆ ಸೌದಾಬಿ ಹನೀಫ್, ಪಂಚಾಯತ್ ಲೈಬ್ರರಿ ಕೌನ್ಸಿಲ್ ಸಂಚಾಲಕ ರಾಮಕೃಷ್ಣ ರೈ ಕುದ್ವ ಶುಭಾಶಂಸನೆಗೈಯುವರು.ಸಲಾವುದ್ದೀನ್ ಮಾಸ್ಟರ್ ವರದಿ ಮಂಡಿಸುವರು.ಸ್ಕೂಲ್ ಆಫ್ ಡ್ರಾಮಾ ನಟ ಮತ್ತು ನಿರ್ದೇಶಕಪ್ರವೀಣ್ ಕಾಡಗಂ ತರಗತಿ ನಡೆಸುವರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಕವಿಗೋಷ್ಠಿ, ಜಾನಪದ ಗಾಯನ, ಬಹುಮಾನ ವಿತರಣೆ ಮೊದಲಾದವುಗಳು ನಡೆಯಲಿದೆ.

0 Comments