ತಂದೆ ಚಲಾಯಿಸಿದ ಆಟೋ ರಿಕ್ಷಾ ರಸ್ತೆಯ ಹೊಂಡಕ್ಕೆ ಬಿದ್ದು, ಹಿಂಬದಿಯಲ್ಲಿ ತಾಯಿಯ ಮಡಿಲಲ್ಲಿ ಕುಳಿತಿದ್ದ 6 ವರ್ಷದ ಬಾಲಕಿ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ದಾರುಣ ಘಟನೆ ನಡೆದಿದೆ.
ತಿರೂರು ವಳಾಂಜೇರು ಪುರಮಣ್ಣೂರ್ ನಿವಾಸಿ ಫೈಸಲ್- ಬಲ್ಕೀಸ್ ದಂಪತಿಯ ಪುತ್ರಿ ಫೈಸ(6) ಮೃತಪಟ್ಟ ಬಾಲಕಿ. ಈಕೆ ಪುರಮಣ್ಣೂರು ಯು.ಪಿ.ಶಾಲೆಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ನಿನ್ನೆ (ಗುರುವಾರ) ರಾತ್ರಿ 7 ಗಂಟೆಯ. ವೇಳೆ ಈ ಘಟನೆ ನಡೆದಿದೆ. ಫೈಸಲ್ ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಬಂಧಿಕರೋರ್ವರನ್ನು ಬೇಟಿಯಾಗಿ ಮನೆಗೆ ಆಟೋರಿಕ್ಷದಲ್ಲಿ ಹಿಂತಿರುಗುವ ವೇಳೆ ಇಒ ದುರ್ಘಟನೆ ಸಂಭವಿಸಿದೆ. ಆಟೋ ರಿಕ್ಷ ರಸ್ತೆಯ ಹೊಂಡಕ್ಕೆ ಬಿದ್ದಾಗ ಅದರ ಹಿಂಬಾಗ ಮೇಲಕ್ಕೆದ್ದಿದ್ದು ಈ ವೇಳೆ ತಾಯಿಯ ಮಡಿಲಲ್ಲಿದ್ದ ಮಗು ಹೊರಕ್ಕೆಸೆಯಲ್ಪಟ್ಟಿತು. ಗಂಭೀರ ಗಾಯಗೊಂಡ ಫೈಸಾಳನ್ನು ತಿರೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ರಾತ್ರಿ 11 ಗಂಟೆಯ ವೇಳೆ ಫೈಸಾ ಕೊನೆಯುಸಿರೆಳೆದಳು.
0 Comments