Ticker

6/recent/ticker-posts

ಸರಕಾರ ನೀಡಿದ ಜಾಗ, ರಸ್ತೆ, ಮನೆ ಎಂಬಿವುಗಳನ್ನು ಸಂರಕ್ಷಿಸಲು ಆಗ್ರಹ, ಏಣಿಯರ್ಪು ಲೈಫ್ ವಿಲ್ಲಾದ ಜನರಿಂದ ಬೇಳ ವಿಲೇಜು ಕಚೇರಿಗೆ ಮುತ್ತಿಗೆ


 ನೀರ್ಚಾಲು: ಸರಕಾರ ನೀಡಿದ ಜಾಗ, ರಸ್ತೆ, ಮನೆ ಎಂಬಿವುಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಎಣಿಯರ್ಪು  ಲೈಫ್ ಹೌಸ್  ವಿಲ್ಲಾದ ಜನರು ಬೇಳ ವಿಲೇಜು ಆಫೀಸಿಗೆ ಮುತ್ತಿಗೆ ನಡೆಸಿದರು. ಎಣಿಯರ್ಪು ಲೈಫ್ ವಿಲ್ಲಾದ ಜನರು ರೂಪಿಸಿದ ಕ್ರಿಯಾ ಸಮಿತಿಯ ಆಶ್ರಯದಲ್ಲಿ ಮುತ್ತಿಗೆ ನಡೆದಿತ್ತು. ಇಲ್ಲಿ ಸರಕಾರ ನೀಡಿದ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸುತ್ತಿದ್ದಾರೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ. ಮಧೂರು ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯನ್ನು ಪೊಲೀಸರು ತಡೆದರು. ಅನಂತರ ನಡೆದ ಪ್ರತಿಭಟನೆಯನ್ನು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಲತೀಫ್ ಕೆ.ಎಂ.ಅಧ್ಯಕ್ಷತೆ ವಹಿಸಿದರು. ಸಂಚಾಲಕ ಎನ್.ಸೀನತ್ ಸ್ವಾಗತಿಸಿದರು. ಅಸ್ವ.ಪ್ರಕಾಶ್ ಅಮ್ಮಣ್ಣಾಯ, ಸಯ್ಯದ್ ಸೈನುಲ್ ಅಬೀದ್, ಕೆ.ಶಾರದ, ಸುಬೈರ್ ಬಾಪಾಲಿಪನಂ, ಅಬ್ದುಲ್ ಖಾದರ್ ಮಾನ್ಯ, ಉದಯ ತಲ್ಪನಾಜೆ,  ಎಂ.ಎಸ್.ಯೋಗೇಶ್, ಮೊದಲಾದವರು ಮಾತನಾಡಿದರು.

Post a Comment

0 Comments