ಮೀಯಪದವು: ಶೈಕ್ಷಣಿಕ ವರ್ಷದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ವ್ಯಂಗ್ಯ ಚಿತ್ರ ಕಾರ್ಯಾಗಾರವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆ ಮೀಯಪದವು ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೊಹಮ್ಮದಾಲಿ ಅವರು ನೆರವೇರಿಸಿದರು. ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಬಾಲಸುಬ್ರಹ್ಮಣ್ಯ. ಕೆ.ಯಂ. ಅವರು ಅತಿಥಿಯಾಗಿ ಭಾಗವಹಿಸಿದರು. ಶಾಲಾ ಮುಖ್ಯಸ್ಥರಾದ ಮೃದುಲಾ.ಕೆ.ಯಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಶ್ರೀ ಜಯಪ್ರಕಾಶ ನಾರಾಯಣ: ತೊಟ್ಟಿತ್ತೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ವರೆಗೆ ಶಾಲೆಯಲ್ಲಿ ಕೈಕೊಂಡ ನಡೆದ ಕನ್ನಡ ಸಾಹಿತ್ಯ ಪರ ಕಾರ್ಯಕ್ರಮಗಳ ಅವಲೋಕನವನ್ನು ಕನ್ನಡ ಅಧ್ಯಾಪಕಿ ಸಾವಿತ್ರಿ ಅವರು ನಡೆಸಿಕೊಟ್ಟರು. ಕನ್ನಡ ಅಧ್ಯಾಪಕರಾದ ರಾಜಾರಾಮ, ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಕನ್ನಡ ಅಧ್ಯಾಪಕಿ ಸುಧಾ.ಕೆ.ಯಂ. ಅವರು ಕಾರ್ಯಕ್ರಮ ನಿರೂಪಿಸಿದರು. ಗಣಿತ ಅಧ್ಯಾಪಕರಾದ ಪ್ರಭಾಕರ ಅವರು ಧನ್ಯವಾದ ಸಮರ್ಪಿಸಿದರು. ಶಾಲಾ ಅಧ್ಯಾಪಕ ವೃಂದ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಪಾಲ್ಗೊಂಡರು. ಉದ್ಘಾಟನಾ ಕಾರ್ಯಕ್ರಮದ ನಂತರ ವ್ಯಂಗ್ಯ ಚಿತ್ರ ಕಾರ್ಯಾಗಾರವನ್ನು ಖ್ಯಾತ ವ್ಯಂಗ್ಯ ಚಿತ್ರ ರಚನೆಗಾರ ಬಾಲ ಮಧುರಕಾನನ ಅವರು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದರು.
0 Comments