Ticker

6/recent/ticker-posts

ಕೊಡುಗೈದಾನಿ, ಸಮಾಜಸೇವಕ, ಬಡವರ ಬಂಧು ಕುಳೂರು ಸದಾಶಿವ ಶೆಟ್ಟಿ ಅವರಿಂದ ಕಾರ್ಮಿಕರಿಗೆ ಅಫಘಾತ ವಿಮೆ; ಅರ್ಜಿ ಸಲ್ಲಿಸಲು ಕೋರಿಕೆ


 ಮಂಜೇಶ್ವರ: ಕೊಡುಗೈದಾನಿ, ಸಮಾಜಸೇವಕ, ಬಡವರ ಬಂಧು ಕುಳೂರು ಸದಾಶಿವ ಶೆಟ್ಟಿ ಅವರು ತನ್ನ ಸೇವಾ ವಲಯವನ್ನು ಇನ್ನಷ್ಟು ಕಡೆ ವಿಸ್ತರಿಸಿದ್ದಾರೆ.  ಸಾದಾರಣ ಜನರ ಕಣ್ಣೀರೊರೆಸಲು ಸದಾ  ಸಿದ್ದರಾಗಿರುವ ಅವರೀಗ ಅಪಘಾತ ವಿಮೆ ಏರ್ಪಡಿಸುವ ಮೂಲಕ ತನ್ನ ಸೇವಾ ಮನೋಭಾವವನ್ನು ಮತ್ತೆ ಎತ್ತಿ ತೋರಿಸಿದ್ದಾರೆ.

   ನೂತನ ಯೋಜನೆಯಂತೆ 25 ವರ್ಷದಿಂದ 65 ವರ್ಷದೊಳಗಿನ ಆರೋಗ್ಯವಂತ  ಕಾರ್ಮಿಕರು,  ಕೂಲಿ ಕೆಲಸದವರು, ಮರ ಹತ್ತು ಹತ್ತುವವರು, ಟ್ಯಾಕ್ಸಿ, ಆಟೋ ಚಾಲಕರು ಎಂಬಿವರು ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಒಂದು ಮನೆಯಿಂದ ಒಬ್ಬರಿಗೆ ಮಾತ್ರ ವಿಮೆಗೆ ಸೇರಲು ಅವಕಾಶವಿದೆ.ಆಸಕ್ತರು ಜುಲೈ 15 ರಿಂದ 20 ರ ವರೆಗೆ ಬೆಳಗ್ಗೆ 11 ರಿಂದ 1 ರ ವರೆಗೆ ಮೀಯಪದವು ಬಳಿಯ ಚಿಗುರುಪಾದೆಯಲ್ಲಿರುವ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಕಛೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಬೇಕು

Post a Comment

0 Comments