Ticker

6/recent/ticker-posts

ಯಕ್ಷಮಿತ್ರರು ದುಬೈಯ "ಯಕ್ಷ ಸಂಭ್ರಮ" ಆಮಂತ್ರಣ ಪತ್ರಿಕೆ ಬಿಡುಗಡೆ

 


ದುಬೈ : ಕಳೆದ 21 ವರ್ಷಗಳಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡು ಸೆಪ್ಟೆಂಬರ್ 14 ರಂದು ಇಂಡಿಯನ್ ಎಮಿರೇಟ್ಸ್‌ ಥಿಯೇಟರ್ ಜುಮೈರಾದಲ್ಲಿ ನಡೆಯಲಿರುವ ಯಕ್ಷ ಮಿತ್ರರು ದುಬೈಯ ಯಕ್ಷಸಂಭ್ರಮ-2025 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಕಲಾ ಪೋಷಕರು ಹಾಗೂ ಯಶಸ್ವಿ ಉದ್ಯಮಿ ಹರೀಶ್ ಶೇರಿಗಾರ್ ರವರು ಅಭಿಪ್ರಾಯಪಟ್ಟರು.

 


ಅವರು ನಗರದ ಬರ್ ದುಬೈಯ ಒಮೆಗಾ ಹೊಟೇಲ್ ನ‌ ಸಭಾಂಗಣದಲ್ಲಿ ನಡೆದ ಯಕ್ಷಮಿತ್ರರು ದುಬೈಯ   "ಯಕ್ಷ ಸಂಭ್ರಮ-2025" ಟಿಕೆಟ್ ಬಿಡುಗಡೆ ಕಾರ್ಯಕ್ರಮದ ದೀಪಾ ಬೆಳಗಿಸಿ

ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಾ ಈ ವರ್ಷ 22 ರ ಸಂಭ್ರಮದಲ್ಲಿ "ಶಬರಿಮಲೆ ಸ್ವಾಮಿ ಅಯ್ಯಪ್ಪ" ಒಂದು ಒಳ್ಳೆಯ ಪ್ರಸಂಗವನ್ನು ಆಯ್ಕೆಮಾಡಿ ಪ್ರದರ್ಶನಕ್ಕೆ ತಯಾರಾಗಿದ್ದಿರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭವನ್ನು ಹಾರೈಸಿದರು.ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದ ವೀನಾಸ್ ರೆಸ್ಟೋರೆಂಟ್ ನ ಆಡಳಿತ ನಿರ್ದೇಶಕರಾದ ಪುತ್ತಿಗೆ ವಾಸುದೇವ ಭಟ್, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ಪೂಜಾರಿ,ಕರ್ನಾಟಕ ಸಂಘದ ಉಪಾಧ್ಯಕ್ಷರಾದ ದಯಾ ಕಿರೋಡಿಯನ್, ಉದ್ಯಮಿಗಳಾದ ಜೇಮ್ಸ್ ಮೆಂಡೊನ್ಸ,ಪದ್ಮರಾಜ್ ಎಕ್ಕಾರ್,ಸತೀಶ್ ಶೆಟ್ಟಿ, ಗಮ್ಮತ್ ಕಲಾವಿದೆರ್ ತಂಡದ ನಿರ್ದೇಶಕ ವಿಶ್ವನಾಥ ಶೆಟ್ಟಿ ಸೆಪ್ಟೆಂಬರ್ 14 ರಂದು ನಡೆಯುವ ಶಬರಿಮಲೆ ಸ್ವಾಮಿ ಅಯ್ಯಪ್ಪ ಯಕ್ಷಗಾನಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೇ ಎಂದು ತಿಳಿಸುತ್ತಾ ಶುಭವನ್ನು ಹಾರೈಸಿದರು.

ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನದ ಟಿಕೆಟ್ ಮತ್ತು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ರಿತೇಶ್ ಅಂಚನ್ ಕುಲಶೇಖರವರು ಮಾಡುತ್ತಾ ಸೆಪ್ಟೆಂಬರ್ 14 ರಂದು ಜುಮೈರಾದ ಎಮಿರೇಟ್ಸ್ ಥಿಯೇಟರ್ ನ ರಂಗ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಯಕ್ಷಗಾನ ಪ್ರಾರಂಭವಾಗಲಿದೆ.ನಮ್ಮ ಯಕ್ಷ ಮಿತ್ರರು ಕಲಾವಿದರೊಂದಿಗೆ ಊರಿನ ವೃತ್ತಿಪರ ಮೇಳದ ಕಲಾವಿದರು ಸೇರಲಿದ್ದರೆ.ಹಿಮ್ಮೇಳ ಕಲಾವಿದರಾಗಿ ಬಲಿಪ ಶಿವಶಂಕರ ಭಟ್,ಭರತ್ ಶೆಟ್ಟಿ ಸಿದ್ದಕಟ್ಟೆ,ಸುಬ್ರಹ್ಮಣ್ಯ ಭಟ್ ದೇಲಂತಮಜಲು,ಸಮರ್ಥ್ ಉಡುಪ,ಮುಮ್ಮೇಳ ಕಲಾವಿದರಾಗಿ ಗಣೇಶ್ ಚಂದ್ರಮಂಡಲ,ರಕ್ಷಿತ್ ಶೆಟ್ಟಿ ಪಡ್ರೆ,ಅಕ್ಷಯ್ ಭಟ್ ಶಿರ್ತಾಡಿ,ವೇಷ ಭೂಷಣದಲ್ಲಿ ಜಯಂತ್ ಪೈವಳಿಕೆ,ಪ್ರಸಾದ್ ಕಾಯರ್ ಕಟ್ಟೆಯವರು ನಮ್ಮೊಂದಿಗೆ ಭಾಗವಹಿಸಲಿದ್ದಾರೆ ಎಂದು ಯಕ್ಷಗಾನದ ಮಾಹಿತಿ ನೀಡಿದರು.ವೇದಿಕೆಯಲ್ಲಿ ಸಂಸ್ಥೆಯ ಹಿರಿಯರಾದ ಚಿದಾನಂದ ಪೂಜಾರಿ, ಜಯಂತ್ ಶೆಟ್ಟಿ,ರವಿ ಕೋಟ್ಯಾನ್ ಉಪಸ್ಥಿತರಿದ್ದರು.


ಯುಎಇಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸಂಘಟಕರಾದ ದೀಪಕ್ ಎಸ್.ಪಿ,ಸಾದನ್ ದಾಸ್,ಸುಗಂದರಾಜ್ ಬೇಕಲ್,ಸ್ಟೀಫನ್ ಮೆನೇಜಸ್,ಮಲ್ಲಿಕಾರ್ಜುನ ಗೌಡ,ಪ್ರಭಾಕರ ಸುವರ್ಣ,ಮನೋಹರ ಹೆಗ್ಡೆ,ಸಂದೇಶ್ ಜೈನ್,ಸಂದೀಪ್ ಕೋಟ್ಯಾನ್, ಶ್ರೀಮತಿ ಜೆಶ್ಮೀತಾ ವಿವೇಕ್,ಸಿದ್ದಲಿಂಗೇಶ್,ಸುನೀಲ್ ಗವಾಸ್ಕಾರ್,ವಾಸು ಶೆಟ್ಟಿ,ನಾಗರಾಜ ರಾವ್ ಉಡುಪಿ ಯವರು ಯಕ್ಷ ಸಂಭ್ರಮಕ್ಕೆ ತಮ್ಮೀಂದಾದ ಸಹಕಾರ ನೀಡಲಾಗುವುದು ಎಂದು ತಿಳಿಸುತ್ತಾ ಶುಭವನ್ನು ಹಾರೈಸಿದರು. ಸಂಸ್ಥೆಯ ಯಕ್ಷಗುರುಗಳಾದ ಕಿಶೋರ್ ಗಟ್ಟಿ ಉಚ್ಚಿಲರವರು ಪ್ರಸಂಗದ ಮಾಹಿತಿಯನ್ನು ನೀಡುತ್ತಾ 22 ನೇ ವರ್ಷದ ಈ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಬೇಕೆಂದು ಯುಎಇಯ ಸಂಘ ಸಂಸ್ಥೆಗಳ ಪದಾಧಿಕಾರಿಗಳಲ್ಲಿ ವಿನಂತಿಸಿದರು.

ಸಂಸ್ಥೆಯ ಅಶೋಕ್ ತೊನ್ಸೆ, ದಿನೇಶ್ ಪೂಜಾರಿ, ಜಗನ್ನಾಥ ಬೆಳ್ಳಾರೆ ಮತ್ತು ಸರ್ವ ಸದಸ್ಯರು, ಕಲಾವಿದರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.ತಂಡದಬಾಲ ಕಲಾವಿದರ ಗಣಪತಿ ದೇವರ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ರಿತೇಶ್ ಅಂಚನ್ ಕುಲಶೇಖರ ಧನ್ಯವಾದವಿತ್ತರು.

ವರದಿ :  ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Post a Comment

0 Comments