Ticker

6/recent/ticker-posts

ಯಕ್ಷಬಳಗ ಹೊಸಂಗಡಿ ಇದರ ಆಷಾಡ ಮಾಸದ ಸರಣಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕರೋಳು ದೇರಣ್ಣ ರೈ ಸಂಸ್ಮರಣೆ

ಮೀಯಪದವು: ಯಕ್ಷಬಳಗ ಹೊಸಂಗಡಿ ಇದರ ಆಷಾಡ ಮಾಸದ ಸರಣಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದೊಂದಿಗೆ ಪ್ರಸಿದ್ಧ ವೇಷಧಾರಿಯಾಗಿದ್ದ ಕರೋಳು ದೇರಣ್ಣ ರೈ ಯವರ ಸಂಸ್ಮರಣೆ ನಡೆಯಿತು. ಯೋಗೀಶ್ ದರ್ಮಮಾರ್ ರವರು ಸಂಸ್ಮರಣ ಭಾಷಣ ಮಾಡಿದರು. ವೆದಮೂರ್ತಿ ರಾಮದಾಸ ಆಚಾರ್ಯರವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೀಂಜ ಗ್ರಾಮಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ರಾಮಪ್ರಸಾದ ನಲ್ಲೂರಾಯ ಹಾಗು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾದ ಸತೀಶ್ ಅಡಪರು ಶುಭ ಹಾರೈಸಿದರು. ನಾಗರಾಜ ಪದಕಣ್ಣಾಯ ಮೂಡಂಬೈಲು ಸ್ವಾಗತಿಸಿ ಅಡ್ವಕೇಟ್ ವಿರಲ ಮೊಗಸಾಲೆ ವಂದಿಸಿದರು. ಸಂಸ್ಮರಣಾ ಕಾರ್ಯಕ್ರಮದ ಬಳಿಕ ಭಿಷ್ಯವಿಜಯವೆಂಬ ತಾಳಮದ್ದಳೆ ಜರಗಿತು. ರತ್ನಾಕರ ಅಳ್ವ ತಲಪಾಡಿ ಭಾಗವತರಾಗಿ, ರಾಜಾರಾಮ ಬಲ್ಲಾಳ್ ಮತ್ತು ಹರಿಶ್ಚಂದ್ರ ನಾಯ್ಕರವರು ಚೆಂಡೆಮದ್ದಳೆ ವಾದನಗೈದರು. ಅಡ್ವಕೇಟ್ ಮುರಳೀಧರ ಬಳ್ಳಕ್ಕುರಾಯ, ಶಂಕರ ಆಚಾರ್ಯಕೋಳ್ಳೂರು, ನಾಗರಾಜ ಪದಕಣ್ಣಾಯ ಮೂಡಂಬೈಲು, ರಾಜಾರಾಮರಾವ್ ಮೀಯಪದವು ಇವರು ಮುಮ್ಮೇಳ ಕಲಾವಿದರಾಗಿ ಭಾಗವಹಿಸಿದ್ದರು.

Post a Comment

0 Comments