Ticker

6/recent/ticker-posts

Ad Code

ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಸಂಭ್ರಮ


 ಉಪ್ಪಳ: ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಬಹಳ ಸಂಭ್ರಮದಿಂದ ನೆರವೇರಿತು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುವಾದೆ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಯಿಪ್ಪಾಡಿ ಶಿಕ್ಷಕ ತರಬೇತಿ ಕೇಂದ್ರದ (ಡಯಟ್) ನ  ಅಜಿತ ಉದ್ಘಾಟಿಸಿದರು. ಮಂಜೇಶ್ವರ ಬಿ. ರ್. ಸಿ ಯ ಬಿ. ಪಿ. ಸಿ ಯಾದ ಸುಮಾದೇವಿ ಓಣಂ ಆಚರಣೆಯ ಔಚಿತ್ಯ ತಿಳಿಸಿದರೆ ಶಾಲಾ ಶಿಕ್ಷಕಿ ರೇಷ್ಮಾ ಹಿನ್ನಲೆಯನ್ನು ತಿಳಿಸಿದರು. ಹಾಗೆಯೇ ಕಾಸರಗೋಡಿನ ಪಿ. ಡಬ್ಲ್ಯೂ. ಡಿ ಅಸ್ತಿಸ್ಟಂಟ್ ಇಂಜಿನಿಯರ್ ಸ್ವಾಲಿಹ ಮತ್ತು ಓವರ್ಸ್ಟರ್. ಪ್ರಜೀಬಾ, ಬಿ. ಆರ್. ಸಿ ಯ ಕ್ಲಸ್ಟರ್ ಕೋ ಓರ್ಡಿನೇಟರ್ ಬ್ರಿಜೇಶ್, ಶಿಕ್ಷಕ ಅಬ್ದುಲ್ ಬಷೀರ್ ಸುಬ್ಬಯ್ಯ ಕಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು ಯಂ ಪಿ. ಟಿ ಎ ಅಧ್ಯಕ್ಷೆ ಸುಷ್ಮಾ ಮತ್ತು ಉಪಾಧ್ಯಕ್ಷೆ ಸೈಬುನಿನ ಭಾಗವಹಿಸಿದರು. ಓಣಂ ಅಂಗ ವಾಗಿ ಅನಿತಾ ಟೀಚರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ನೀಡಲಾಯಿತು. ಶಿಕ್ಷಕಿ ಐಶ್ವರ್ಯ ಮತ್ತು ಅನುಕೃಷ್ಣ ಅವರ ನೇತೃತ್ವದಲ್ಲಿ ಪೂ ಕಳಂ ಹಾಕಲಾಯಿತು. ಮಹಾಬಲಿ ವೇಷಧಾರಿಯಾಗಿದ್ದ ಆಸೀಫ್ ರಾಜ್ ನನ್ನು ಓಣಂ ಹಾಡು, ಓಣಂ ಆಟ, ಓಣಂ ಔ ತಣ ಗಳ ಮೂಲಕ ಸ್ವಾಗತಿಸಲಾಯಿತು ಶಾಲಾ ಶಿಕ್ಷಕಿ ಧನ್ಯ ಸ್ವಾಗತ ಕೋರಿದ ಈ ಕಾರ್ಯಕ್ರದಲ್ಲಿ ಜಸೀಲಾ ಧನ್ಯವಾದ ಸಲ್ಲಿಸಿದರು ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಕಾರ್ಯಕ್ರಮ ನಡೆಸಿ ಕೊಟ್ಟರು..

Post a Comment

0 Comments