Ticker

6/recent/ticker-posts

Ad Code

ಮಂಗಳೂರಿನ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಜಿಮ್ ಶಿಕ್ಷಕನಾದ ಗೆಳೆಯನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಮಂಗಳೂರಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಯುವತಿಯ ಮೃತದೇಹ ಜಿಮ್   ಶಿಕ್ಷಕನಾದ ಗೆಳೆಯನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೋಜಿಕ್ಕೋಡು ಎರಿಂಜಪಾಲತ್ ನಿವಾಸಿ ಆಯಿಷ ರಾಸ(25) ಮೃತಪಟ್ಟ ಯುವತಿ. ನಿನ್ನೆ (ಆದಿತ್ಯವಾರ) ರಾತ್ರಿ ಕೋಜಿಕ್ಕೋಡು ಗೆಳೆಯನ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂದಪಟ್ಟಂತೆ ಪೊಲೀಸರು ಗೆಳೆಯನನ್ನು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

   ಮಂಗಳೂರಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಆಯಿಷ ರಾಸ 3 ದಿನಗಳ ಹಿಂದೆ ಗೆಳೆಯನ ಬಾಡಿಗೆ ಮನೆಗೆ ಬಂದಿದ್ದಳು. ನಿನ್ನೆ ಗೆಳೆಯ ಕಾರ್ಯ ನಿಮಿತ್ತ ಹೊರಗೆ ಹೋಗಿ ಹಿಂತಿರುಗಿದಾಗ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈಕೆ ಆತ್ಮಹತ್ಯೆ ಮಾಡಿದಳೇ, ಗೆಳೆಯ ಕೊಂದು ನೇಣು ಹಾಕಿದನೇ ಎಂಬ ಸಂಶಯ ಉಂಟಾಗಿದೆ.

Post a Comment

0 Comments