ಪೆರ್ಲ : ಸಮಾನತೆ ಹಾಗೂ ಸೌಹರ್ದತೆಯ ಪ್ರತೀಕವಾಗಿ ಆಚರಿಸುವ ಕೇರಳದ ನಾಡ ಹಬ್ಬವಾದ ಓಣಂ ಆಚರಣೆಯನ್ನು ಕೆಥೋಲಿಕ್ ಸಭಾ ಮಣಿಯಂಪಾರೆ ಘಟಕದ ಆಶ್ರಯದಲ್ಲಿ ಮಣಿಯಂಪಾರೆ ಸೈಂಟ್ ಲಾರೆನ್ಸರ ಚರ್ಚಿನಲ್ಲಿ "ಓಣೋತ್ಸವ್ 25" ವೈವಿಧ್ಯಮಯವಾಗಿ ಅಚರಿಸಲಾಯಿತು.
ಚರ್ಚಿನ ಧರ್ಮಗುರುಗಳಾದ ಫಾಧರ್ ನೇಲ್ಸನ್ ಡಿ ಆಲ್ಮೇಡ ಕಾರ್ಯಕ್ರಮ ಉದ್ಘಾಟಿಸಿದರು. ಕೆಥೋಲಿಕ್ ಸಭಾ ಘಟಕ ಅಧ್ಯಕ್ಷ ರೋಹನ್ ಮಣಿಯಂಪಾರೆ ಅಧ್ಯಕ್ಷತೆ ವಹಿಸಿದ್ದರು. ಕೆಥೋಲಿಕ್ ಸಭಾ ಕಾಸರಗೋಡು ವಲಯಾಧ್ಯಕ್ಷ ಪ್ರಾನ್ಸಿಸ್ ಮೊಂತೆರೋ ಮುಖ್ಯ ಅಥಿತಿಗಳಾಗಿದ್ದರು. ಬ್ರದರ್ ಲೋಯಿ ವಿನ್, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ ಶುಭಾಶಂಸನೆಗೈದರು. ರಾಜು ಜೋನ್ ಡಿಸೋಜ ಸ್ವಾಗತಿಸಿ ಕವಿತಾ ಮೋರಸ್ ವಂದಿಸಿದರು. ಜೇಷ್ಮಾ ಲೋಬೊ ನಿರೂಪಿಸಿದರು.
ಬಳಿಕ ಮಕ್ಕಳು ಮಹಿಳೆಯರು ಹಾಗೂ ಪುರುಷರನ್ನೊಳಗೊಂಡ ತಂಡ ರಚಿಸಿ ವಿವಿಧ ಸಾಮೂಹಿಕ ಸ್ಪರ್ಧೆ ನಡೆಸಲಾಗಿತ್ತು. ಮಧ್ಯಾಹ್ನ ನಡೆದ ಓಣಂ ಔತಣ ಕೂಟದಲ್ಲಿ ಕ್ರೈಸ್ತ ಸಮುದಾಯದವರೆಲ್ಲಾ ಒಂದೇ ಕುಟುಂಬಿಕರಂತೆ ಒಟ್ಟಿಗೆ ಕುಳಿತು ಭಕ್ಷ್ಯಭೋಜ್ಯಗಳನ್ನು ಸವಿದರು.
0 Comments