ಬದಿಯಡ್ಕ: ಚೆರ್ಕಳ- ಉಕ್ಕಿನಡ್ಕ ರಸ್ತೆಯ ಹೊಂಡಗಳನ್ನು ಮುಚ್ಚದೇ ಇದ್ದಲ್ಲಿ ಸೆಪ್ಟೆಂಬರ್ 29 ರಿಂದ ಈ ರಸ್ತೆಯಲ್ಲಿನ ಖಾಸಗಿ ಬಸ್ಸು ಯಾನ ಮೊಟಕುಗೊಳಿಸಲಾಗುವುದು ಎಂದು ಪ್ರೈಡ್ ಬಸ್ ಕಾರ್ಮಿಕರ ವಲಯ ಸಮಿತಿ ಎಚ್ಚರಿಕೆ ನೀಡಿದೆ.ವಲಯ ಸಮಿತಿ ಅಧ್ಯಕ್ಷ ಹಾರಿಸ್ ಬದಿಯಡ್ಕ ಅವರು ಜಿಲ್ಲಾಧಿಕಾರಿ, ಶಾಸಕ, ಲೋಕೋಪಯೋಗಿ ಸಚಿವರು, ಲೋಕೋಪಯೋಗಿ ಇಂಜಿನಿಯರ್, ಕಿಫ್ ಬಿ, ಆರ್.ಟಿ.ಒ, ಪೊಲೀಸರು ಎಂಬಿವರಿಗೆ ಮನವಿ ಸಲ್ಲಿಸಿದ್ದಾರೆ.
ಚೆರ್ಕಳ- ಉಕ್ಕಿನಡ್ಕ ರಸ್ತೆಯ ಪಳ್ಳತ್ತಡ್ಕ, ಚರ್ಲಡ್ಕ, ಎಡನೀರು ಸಹಿತ ವಿವಿದೆಡೆಗಳಲ್ಲಿ ಆಳವಾದ ಹೊಂಡಗಳಿವೆ. ಈ ಹೊಂಡಗಳ ಮೂಲಕ ಬಸ್ಸು ಸಹಿತ ವಾಹನಗಳನ್ನು ಚಲಾಯಿಸಲು ಕಾರ್ಮಿಕರು ಸಂಕಷ್ಟಪಡುತ್ತಿದ್ದಾರೆ.
ಉಕ್ಕಿನಡ್ಕ ಮೆಡಿಕಲ್ ಕಾಲೇಜು ಶೀಘ್ರದಲ್ಲಿಯೇ ಆರಂಭವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಹೊಂಡ ಮುಚ್ಚಬೇಕಾಗಿದೆ. ಇಲ್ಲವಾದರೆ ಈ ತಿಂಗಳ 29 ರಿಂದ ಚೆರ್ಕಳ- ಬದಿಯಡ್ಕ- ಪೆರ್ಲ, ಚೆರ್ಕಳ- ನೆಲ್ಲಿಕಟ್ಟೆ- ಪೈಕ- ಮುಳ್ಳೇರಿಯ ರೂಟಿನಲ್ಲಿ ಸಾಗುವ ಎಲ್ಲ ಖಾಸಗಿ ಬಸ್ಸುಗಳು ಮುಷ್ಕರ ನಡೆಸಲಿವೆ ಎಂದವರು ಎಚ್ಚರಿಕೆ ನೀಡಿದ್ದಾರೆ
0 Comments