Ticker

6/recent/ticker-posts

Ad Code

ಮುಳಿಯಾರು ಮುಂಡಕೈ ಸರಕಾರಿ ಎಲ್.ಪಿ. ಶಾಲೆಗೆ ಸಮಾಜದ್ರೋಹಿಗಳು ಕಲ್ಲೆಸೆದು ಹಾನಿ


 ಮುಳ್ಳೇರಿಯ: ಮುಳಿಯಾರು ಮುಂಡಕೈ ಸರಕಾರಿ ಎಲ್.ಪಿ. ಶಾಲೆಗೆ ಸಮಾಜದ್ರೋಹಿಗಳು ಕಲ್ಲೆಸೆದು ಹಾನಿಯೆಸಗಿದ ಘಟನೆ ನಡೆದಿದೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಾದ  ಪಿ.ವಿ.ಶ್ರೀಜ ಅವರು ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ.‌ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ (ಸೋಮವಾರ) ಬೆಳಗ್ಗೆ ಶಾಲೆ ತೆರೆಯಲು ಬಂದಾಗ ಹಾನಿಯೆಸಗಿದ ಬಗ್ಗೆ ಗಮನಕ್ಕೆ ಬಂದಿದೆ. ನಾಲ್ಕು ತರಗತಿ ಕೋಣೆಗಳು, ಶೌಚಾಲಯ,  ಊಟ ತಯಾರಿ ಕೇಂದ್ರ ಎಂಬಿವುಗಳ ಗಾಜು ಕಲ್ಲೆಸೆದು ಒಡೆಯಲಾಗಿದೆ. 4 ಸಾವಿರ ರೂ ನಷ್ಟ ಅಂದಾಜಿಸಲಾಗಿದೆ. ಆರೋಪಗಳನ್ನು ಕೂಡಲೇ ಬಂಧಿಸಬೇಕೆಂದು ರಕ್ಷಕ- ಶಿಕ್ಷಕ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು

Post a Comment

0 Comments