Ticker

6/recent/ticker-posts

Ad Code

ನಲ್ಕದಲ್ಲಿ ಸಂಭ್ರಮದ ಓಣಂ ಆಚರಣೆ


ಪೆರ್ಲ : ಭಗವತ್ ಸಿಂಗ್ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ಓಣಂ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷ ಸುಧಾಕರ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಓಣಂ ಸಾಮಾಜಿಕ ಸಾಮರಸ್ಯ ಬಿಂಬಿಸುವ ಹಬ್ಬವಾಗಿದ್ದು ನಾಡಿನ ಸಮೃದ್ಧಿಯನ್ನು ಸೂಚಿಸುತ್ತದೆ ಎಂದು  ಹೇಳಿದರು.  ಮಹಾಬಲಿ ರಾಜನು ಕೇರಳವನ್ನು ವೀಕ್ಷಿಸಲು ಬರುವ ಸಂದರ್ಭದ ಆಚರಣೆಯನ್ನು ಊರಿನ ಎಲ್ಲರೂ ಒಟ್ಟು ಸೇರಿ ಸಂಭ್ರಮದಿಂದ ಆಚರಿಸುವುದು ಸಂತೋಷ ಎಂದು ಅವರು ನುಡಿದರು. ಮುದ್ದೇನಹಳ್ಳಿ ಸತ್ಯಸಾಯಿ ಸಂಸ್ಥೆಗಳ ಉಪನ್ಯಾಸಕ ಕಬೀರ್ ಅಡ್ಕಸ್ಥಳ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿ 'ವಸುದೈವ ಕುಟುಂಬಕಂ' ಎಂಬ ಸತ್ಯ ಸಾಕ್ಷಾತ್ಕಾರವಾಗಲು ಹಬ್ಬಗಳ ಆಚರಣೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯೆ  ಆಶಾಲತಾ, ಶಾಲಾ  ಮುಖ್ಯ ಶಿಕ್ಷಕ ಶ್ರೀಪತಿ ಎನ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಲಯ ನಲ್ಕ ಒಕ್ಕೂಟ ಅಧ್ಯಕ್ಷ  ಶ್ರೀಧರ ಮಣಿಯಾಣಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಪಾರ್ವತಿ ಟೀಚರ್ ಕೈಲಾಸ, ಎನ್.ಸಿ.ಸಿ ಅಧಿಕಾರಿ, ಉಪನ್ಯಾಸಕ ಕ್ಯಾಪ್ಟನ್ ಈಶ್ವರ ನಾಯಕ್ ಅವರನ್ನು ಗೌರವಿಸಲಾಯಿತು. ಶ್ವೇತಾ ಹಾಗೂ ಮಮತ ಟೀಚರ್  ಸನ್ಮಾನಿತರ ಪರಿಚಯ ಮಾಡಿದರು. ಪಾರ್ವತಿ ಟೀಚರ್ ಅವರು ಓಣಂ ಹಾಡು ಹಾಡಿ ರಂಜಿಸಿದರು‌ ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವನಜ  ಸ್ವಾಗತಿಸಿ ನಳಿನಿ ಟೀಚರ್ ವಂದಿಸಿದರು.ಶಿಕ್ಷಕ ಕಮಲಾಕ್ಷ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಗ್ರಂಥಾಲಯದ ಅಧ್ಯಕ್ಷ ಶ್ರೀಧರ ಭಟ್, ಕಾರ್ಯದರ್ಶಿ ಶಶಿಧರ ವರ್ಮುಡಿ, ವಿನೋದ್, ನಾರಾಯಣ, ಜಗದೀಶ್ ಮುಂತಾದವರು ನೇತೃತ್ವ ವಹಿಸಿದ್ದರು.

Post a Comment

0 Comments