ಹೃದಯ ಸಂಬಂಧ ರೋಗದಿಂದ ಬಳಲುತ್ತಿರುವ ತಂದೆಯನ್ನು ಮಗ ಥಳಿಸಿ ಕೊಲೆಗೈದ ಘಟನೆ ನಡೆದಿದೆ. ತಿರುವನಂತಪುರಂ ಕುಟ್ಟಿಚ್ಚಲ್ ನಿವಾಸಿ ರವೀಂದ್ರನ್(65) ಮೃತಪಟ್ಟ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ರ ನಿಶಾದ್ ನನ್ನು ಪೊಲೀಸರು ಬಂಧಿಸಿದ್ದಾರೆ ನಿನ್ನೆ (ಸೋಮವಾರ) ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ.
ಮನೆಯಲ್ಲಿ ತಂದೆ ಮಗನ ಮಧ್ಯೆ ಪರಸ್ಪರ ವಾಗ್ಯುದ್ದ ನಡೆದಿತ್ತು. ಮಾತು ಬೆಳೆದು ಪುತ್ರ ನಿಶಾದ್, ತಂದೆಯ ಮೇಲೆ ಹಲ್ಲೆಗೈದನೆನ್ನಲಾಗಿದೆ. ಕೂಡಲೇ ಸಂಬಂಧಿಕರು ರವೀಂದ್ರನ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ತಂದೆಯನ್ನು ಥಳಿಸಿದ ನಂತರ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದ ಪುತ್ರ ನಿಶಾದ್ ಇದೀಗ ಪೊಲೀಸರ ಅತಿಥಿಯಾಗಿದ್ಧಾನೆ
0 Comments