ಮೀಯಪದವು: ಮಂಜೇಶ್ವರ ಉಪಜಿಲ್ಲಾ ಕ್ರೀಡಾಮೇಳ 2025ರ ಸಂಘಟಕ ಸಮಿತಿ ರಚನೆ ಸಭೆ ಮೀಯಪದವಿನ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀಮತಿ, ಸುಂದರಿ, ಆರ್. ಶೆಟ್ಟಿ ಸಭೆಯನ್ನು ಉದ್ಘಾಟಿಸಿದರು.
ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀ, ಜಾರ್ಜ್ ಕ್ರಾಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೀಂಜ ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯರಾದ ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯರಾದ ಕೆ. ವಿ. ರಾಧಾಕೃಷ್ಣ, ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ಜಯೇಶ್, ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕರಾದ ಡಾ. ಜಯಪ್ರಕಾಶ ನಾರಾಯಣ, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕರಾದ ಶ್ರೀಧರ ರಾವ್, ಮೀಂಜ ಪಂಚಾಯತು ಆರೋಗ್ಯಾಧಿಕಾರಿ ನಾಸಿಲ ಶುಭಾಶಂಸನೆಗೈದರು. ಶಾಲಾ ಮುಖ್ಯ ಶಿಕ್ಷಕರಾದ ಮೃದುಲಾ. ಕೆ. ಎಂ ಕ್ರೀಡಾಮೇಳದ ಸಂಘಟಕ ಸಮಿತಿಯ ಕರಡು ಪ್ರತಿಯನ್ನು ಮಂಡಿಸಿದರು. ಮುಖ್ಯ ಶಿಕ್ಷಕರ ವೇದಿಕೆಯ ಕಾರ್ಯದರ್ಶಿಯಾದ ಶ್ಯಾಮ ಭಟ್ ಕ್ರೀಡಾಮೇಳದ ಮುಂಗಡ ಪತ್ರ ಮಂಡಿಸಿದರು. ಮೀಂಜ ಪಂಚಾಯತಿನ ವಿವಿಧ ವಾರ್ಡುಗಳ ಸದಸ್ಯರು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಬಿ.ಆರ್.ಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶಾಲಾ ದಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಇಬ್ರಾಹಿಂ ಹೊನ್ನಕಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ರಮೇಶ್, ಕೆ.ಎನ್ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಶ್ರೀ. ಅರವಿಂದಾಕ್ಷ ಭಂಡಾರಿ ಧನ್ಯವಾದವಿತ್ತರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
0 Comments