Ticker

6/recent/ticker-posts

Ad Code

ಕರ್ತವ್ಯದೊತ್ತಡ ತಾಳಲಾರದೆ ಬಿಎಲ್‌ಒ ಆತ್ಮಹತ್ಯೆಗೆ ಶರಣು

 


ಕಾಸರಗೋಡು : ತ್ರಿಸ್ತರ ಪಂಚಾಯತು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತದಾನದ ಪ್ರಕ್ರಿಯೆ ಪೂರೈಸುವ ಕರ್ತವ್ಯಕ್ಕೆ ನಿಯುಕ್ತಿಗೊಂಡಿದ್ದ ಬಿಎಲ್‌ಒ ಒರ್ವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಕರಣ ನಡೆದಿದೆ. 

ಪಯ್ಯನ್ನೂರಿನ ಎಟ್ಟುಕುಡುಕ್ಕ ಎಂಬಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)

ಅನೀಶ್ ಜಾರ್ಜ್ (45) ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತೀವ್ರ ಕೆಲಸದ ಒತ್ತಡ ಆತ್ಮಹತ್ಯೆಗೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.

  ಭಾನುವಾರ ಮಧ್ಯಾಹ್ನ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಆತ್ಮಹತ್ಯೆ ಎನ್ನಲಾಗಿದೆ.

ಮಾಹಿತಿ ಪಡೆದ  ಪಯ್ಯನ್ನೂರು ಡಿವೈಎಸ್ಪಿ ಕೆ. ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಅನೀಶ್ ಜಾರ್ಜ್ ಸ್ಥಳೀಯ  ಶಾಲಾ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Post a Comment

0 Comments