Ticker

6/recent/ticker-posts

Ad Code

ಅಡ್ಕತ್ತಬೈಲ್ ಗರಡಿ ಉತ್ಸವ ಸಮಿತಿ ರೂಪೀಕರಣ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

 

ಕಾಸರಗೋಡು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ಕತ್ತಬೈಲ್ ಇದರ ಪುನರ್ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಮಾರ್ಚ್ 31 ಮಂಗಳವಾರದಿಂದ ಏಪ್ರಿಲ್ 2 ಗುರುವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಉತ್ಸವ ಸಮಿತಿ ರೂಪೀಕರಣ  ಕ್ಷೇತ್ರ ಸನ್ನಿಧಿಯಲ್ಲಿ ಜರಗಿತು. ನಗರ ಸಭೆ 4ನೇ ವಾರ್ಡ್ ಸದಸ್ಯ ಗುರು ಪ್ರಸಾದ್ ಅವರು 5ನೇ ವಾರ್ಡ್ ಸದಸ್ಯ ಹರೀಶ್ ಕೆ ಆರ್ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಉತ್ಸವ ಸಮಿತಿ ರೂಪೀಕರಿಸಲಾಯಿತು ರಕ್ಷಾಧಿಕಾರಿಯಾಗಿ ವಿಷ್ಣು ಪ್ರಕಾಶ್ ತಂತ್ರಿ, ಗೌರವಾಧ್ಯಕ್ಷರಾಗಿ ಭಾಸ್ಕರ ಸುವರ್ಣ ಗರಡಿ ಮನೆ, ನೂತನ ಅಧ್ಯಕ್ಷರಾಗಿ ಎ ಪ್ರೇಮ್ ಜಿತ್ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮೋಹನ್ ದಾಸ್, ಚಂದ್ರಕಲಾ ಇವರು ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಕೆ, ಜತೆ ಕಾರ್ಯದರ್ಶಿಯಾಗಿ ಕಾರ್ತಿಕ್, ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ, ಸ್ವಾಗತ ಸಮಿತಿಯಲ್ಲಿ ರಘು ಮೀಪುಗುರಿ, ಗುರುಪ್ರಸಾದ್ ಪ್ರಭು, ಕಮಲಾಕ್ಷ ಸುವರ್ಣ, ಶಿವ ಕೆ, ಪ್ರಚಾರ ಸಮಿತಿಯಲ್ಲಿ ಪುರುಷೋತ್ತಮ್ ನಾಯ್ಕ್, ದೀಕ್ಷಿತ್, ಕಾರ್ತಿಕ್, ಹಾಗೂ ಇತರ ಉಪಸಮಿತಿ ಗಳನ್ನು ರಚಿಸಲಾಯಿತು. ಕಾರ್ಯಕ್ರಮದಲ್ಲಿ ಕಾಳ್ಯಂಗಾಡ್ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೇಸರರಾದ  ಅಚ್ಚುತ ಪೂಜಾರಿ, ಹೊಸತಾಗಿ ಚುನಾಯಿತರಾದ ನಗರ ಸಭಾ ಸದಸ್ಯ ಗುರು ಪ್ರಸಾದ್ ಪ್ರಭು, ಹರೀಶ್ ಕೆ ಆರ್ ಇವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಮಹೇಶ್ ಎ, ಮಚ್ಚೇಂದ್ರ, ನವೀನ್ ಪೂಜಾರಿ, ಉಮೇಶ್, ವೇಣುಗೋಪಾಲ, ಹರಿಪ್ರಸಾದ್, ಕೆ ವಿ ಸತ್ಯನಾರಾಯಣ ರಾವ್, ಪ್ರವೀಣ್ ಕುಮಾರ್, ಸುಜಯ ಶೆಟ್ಟ, ಪದ್ಮಾವತಿ, ಜಯಶ್ರೀ ಅಶೋಕ ಇನ್ನಿತರರು ಉಪಸ್ಥಿತರಿದ್ದರು.

Post a Comment

0 Comments