ಮಂಗಳೂರು : ನಗರದಲ್ಲಿ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ ಗಣೇಶ್ ಪ್ರಸಾದ್ ರೂಟ್ ನಂಬರ್ 27 ರಲ್ಲಿ ಸಂಚಾರಕ್ಕೆ ರೆಡಿಯಾಗಿದೆ. ಖಾಸಗಿ ಬಸ್ ಮಾಲೀಕ ದಿಲ್ರಾಜ್ ಆಳ್ವ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಫೆಬ್ರವರಿ 26ರಂದು ರೂಟ್ ಸಂಖ್ಯೆ 27 ರಲ್ಲಿ ಹೊಸ ಎಲೆಕ್ಟ್ರಿಕ್ ಬಸ್ ಅನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿಸಲಾಗಿದೆ. ಈ ಬಸ್ ಮಂಗಳಾದೇವಿ ದೇವಸ್ಥಾನದಿಂದ ಆರಂಭವಾಗಿ ನಗರದ ವಿವಿಧ ಭಾಗಗಳಿಗೆ ಸಂಪರ್ಕಿಸಲಿದೆ. ಈ ವ್ಯವಸ್ಥೆಯಿಂದ ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಮಾದರಿಯಾಗಲಿದೆ.

0 Comments