ಬದಿಯಡ್ಕ: ರಾಜ್ಯ ಸರಕಾರ ಆಯುಷ್ ವಿಭಾಗ, ನ್ಯಾಶನಲ್ ಆಯುಶ್ ಮಿಶನ್ ಕೇರಳ ನೇತೃತ್ವದಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿ ಆಯುಷ್ ಆರೋಗ್ಯ ವಾಹನದ ಮೂಲಕ ವಿವಿಧ ಕೇಂದ್ರಗಳಲ್ಲಿ ಜನಜಾಗೃತಿ ಮೂಡಿಸಲಾಯಿತು. ನೀರ್ಚಾಲು ಮೇಲಿನ ಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿದರು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನಿಟ್ಟು ನಿತ್ಯ ಜೀವನವನ್ನು ನಡೆಸಬೇಕು. ರೋಗಬಂದಮೇಲೆ ಚಿಕಿತ್ಸೆ ಮಾಡುವುದಕ್ಕಿಂತ ರೋಗಬಾರದಂತೆ ತಡೆಯುವುದು ಬಹುಮುಖ್ಯ. ನಿರಂತರ ಆರೋಗ್ಯ ತಪಾಸಣೆ ಮಾಡುವಲ್ಲಿ ಯಾರೂ ನಿರಾಸಕ್ತಿಯನ್ನು ತೋರಿಸಬಾರದು ಎಂದರು. ನೀರ್ಚಾಲು ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಜಯಶ್ರೀ ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಉಷಾ ಕೆ., ಮಧುಸೂಧನ ಕಂಗಿಲ, ಶ್ಯಾಮಪ್ರಸಾದ ಸರಳಿ, ಸಾಮಾಜಿಕ ಕಾರ್ಯಕರ್ತ ಹಮೀದ್ ಬದಿಯಡ್ಕ ಪಾಲ್ಗೊಂಡಿದ್ದರು.

0 Comments