ಮಂಜೇಶ್ವರ : ಶ್ರೀ ಮಲರಾಯ ಧೂಮವಾತಿ ಧರ್ಮದೈವ ಕುಪ್ಪೆ ಪಂಜುರ್ಲಿ ನಾಗ ಪರಿವಾರ ದೈವಸ್ಥಾನ ಕಣಿಹಿತ್ತಿಲು ಬಾಯಾರು ಇಲ್ಲಿನ ನಾಗ ದೇವರ ಪುನರ್ ಪ್ರತಿಷ್ಠೆಗೆ ಶಿಲ್ಪಿಗಳಾದ ರಮೇಶ್ ಕಾರಂತರ ನಿರ್ದೇಶನದಲ್ಲಿ ಶ್ರೀ ಉದಯ ತುಕರಾಮ ಆಚಾರ್ಯ ಕಾಸರಗೋಡು ಇವರ ನೇತೃತ್ವದಲ್ಲಿ ಶಿಲಾನ್ಯಾಸವು ನಡೆಯಿತು. ಈ ಸಂಧರ್ಭದಲ್ಲಿ ಕುಟುಂಬದ ಹಿರಿಯರು ಶ್ರೀ ಕೊರಗಪ್ಪ ಗುರುಸ್ವಾಮಿ ಕಾಸರಗೋಡು ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಶ್ರೀಧರ್ ಬಾಳೆಕಲ್ಲು, ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಬಂಟಪ್ಪ ಪೂಜಾರಿ ಕೆಮ್ಮಣ್ಣು, ನಾರಾಯಣ ಪೂಜಾರಿ ಕೊರಕ್ಕೊಡು, ಮೇಸ್ತ್ರಿ ಶ್ರೀಧರ್ ಚೆರುಗೋಳಿ, ಕೊರಗಪ್ಪ ಪೂಜಾರಿ ಸುಣ್ಣಾಡ,ನೆರೆಕರೆಯ ಭಕ್ತರು ಮತ್ತು ದೈವದ ಪೂಜಾರಿಗಳು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಮಾರ್ಚ್ 18 ಬುಧವಾರ ಬೆಳಿಗ್ಗೆ ಸರ್ಪ ಸಂಸ್ಕಾರ, 19 ಗುರುವಾರ ಬೆಳಿಗ್ಗೆ: ಆಶ್ಲೇಷ ಬಲಿ ಪೂಜೆ, ಸಂಜೆ ವಾಸ್ತು ಪೂಜೆ ಕಲಶಪೂಜೆ , 20 ಶುಕ್ರವಾರ ಬೆಳಿಗ್ಗೆ ಪ್ರತಿಷ್ಠೆ ಕಾರ್ಯಕ್ರಮವು ಹಾಗೂ ಏಪ್ರಿಲ್ 04 ಶನಿವಾರ ಬೆಳಿಗ್ಗೆ ಹರಿಸೇವೆ ಸಂಜೆ ಪರಿವಾರ ದೈವಗಳ ನೇಮೋತ್ಸವ,ಏಪ್ರಿಲ್ 05 ಆದಿತ್ಯವಾರ ಧೂಮಾವತಿ ಹಾಗೂ ಮಲರಾಯ ದೈವಗಳ ನೇಮೋತ್ಸವ ನಡೆಯಲಿರುವುದು.

0 Comments