ವಿಟ್ಲ : ಕುಡ್ತಮುಗೇರು ದಾರಿಯಾಗಿ ಸಾಲೆತ್ತೂರು ಸಮೀಪದ ಕಾಡುಮಠ ಎಂಬಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ವೇಳೆ ಮಾಹಿತಿ ತಿಳಿದ ಹಿಂದೂ ಮುಖಂಡರು ಕಾರ್ಯಾಚರಣೆ ನಡೆಸಿದ ಬಗ್ಗೆ ವರದಿಯಾಗಿದೆ. ರಮ್ಜಾನ್ ಹಬ್ಬದ ಹಿನ್ನಲೆಯಲ್ಲಿ ಅಕ್ರಮ ಗೋಸಾಗಾಟ ವ್ಯಾಪಕಗೊಂಡಿದ್ದು ಕಳ್ಳ ಸಾಗಾಟದಾರರು ನಕಲಿ ಪರವಾನಿಗೆ ಬಳಸಿ ಸಾಗಿಸುತ್ತಿದ್ದಾರೆಂದು ಸ್ಥಳೀಯರು ದೂರಿದ್ದಾರೆ. ಕುಡ್ತಮುಗೇರಿನ ಹಿಂದೂ ಕಾರ್ಯಕರ್ತರು ಈ ಬಗ್ಗೆ ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದರು. ಎಸ್ ಐ ರವೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯ ಪ್ರವೃತ್ತರಾದರು.
ಈ ಬಗ್ಗೆ ಮಾಹಿತಿ ಅರಿತ ಹಿಂದೂ ಸಂಘಟನೆ ಪ್ರಮುಖರಾದ ಅಕ್ಷಯ್ ರಜಪೂತ್ ಸ್ಥಳಕ್ಕೆ ಆಗಮಿಸಿ ಅಕ್ರಮ ಗೋಸಾಗಾಟ ತಡೆದ ಕಾರ್ಯಕರ್ತರನ್ನು ಅಭಿನಂದಿಸಿ ಬೆಂಬಲ ಸೂಚಿಸಿದ್ದು, ಅಕ್ರಮ ಗೋಸಾಗಾಟ ಮಾಡುವವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

0 Comments