ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಾದಾಚಾರಿಗಳಿಗೆ ನಡೆಯಲು ನಿರ್ಮಾಣವಾಗಲಿರುವ ಮೇಲ್ಸೇತುವೆಗೆ ಅವಕಾಶ ನೀಡಲಾದ ಕನಿಲ ಮತ್ತು ಐಲ ಪ್ರದೇಶಗಳಿಗೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮತ್ತು ಬಿಜೆಪಿ ಮುಖಂಡರು ಭೇಟಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನಂತರ, ಕನಿಲ ಮತ್ತು ಐಲ ದೇವಾಲಯಗಳಲ್ಲಿ ಜನತೆಗೆ ಉತ್ಸವ ಮೆರವಣಿಗೆಗಳು ನಡೆಸಲು ಅಡ್ಡಿಯಾಗುತ್ತಿದೆ ಎಂದು ಸೂಚಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವನ್ನು ಸಂಪರ್ಕಿಸಿತ್ತು. ಇದರಂತೆ ಈ ಎರಡು ಕಡೆಗಳಲ್ಲಿ ಪಾದಾಚಾರಿಗಳಿಗೆ ನಡೆದಾಡಲು ಅನುಕೂಲವಾಗಲು ಮೇಲ್ಸೇತುವೆಗೆ ಅವಕಾಶ ನೀಡಲಾಗಿದೆ.
ಐಲ ದೇವಾಲಯದ ಟ್ರಸ್ಟಿ ನಾರಾಯಣ ಹೆಗ್ಡೆ, ಐಲ ಮತ್ತು ಕನಿಲ ದೇವಾಲಯದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಬಿಜೆಪಿ ಮಂಜೇಶ್ವರ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ., ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಲ್ಸರಾಜ್ ಕೆ. ಪಿ, ಹಿರಿಯ ನಾಯಕರಾದ ವೀರಪ್ಪ ಅಂಬಾರ್, ಮೋಹನದಾಸ್ ಐಲ, ಕಿಶೋರ್ ಕುಮಾರ್ ಬಿ. ಮಾಳಿಗ ಅಬ್ದುಲ್ಲಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


0 Comments