Ticker

6/recent/ticker-posts

Ad Code

ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ : ಪೋಕ್ಸೋ ಪ್ರಕರಣದ ಆರೋಪಿಗಳ ಸಹಿತ 33 ಜನರ ಬಂಧನ

ಕಾಸರಗೋಡು : ಮಂಜೇಶ್ವರದ ಲಾಡ್ಜ್ ಕೊಠಡಿಯಲ್ಲಿ ಯುವಕ ಮತ್ತು ಯುವತಿಯ ನಗ್ನ ಚಿತ್ರ ತೆಗೆದು ಬೆದರಿಸಿದ ಪ್ರಕರಣದ ಪ್ರಥಮ ಆರೋಪಿ, ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಗಳು ಮತ್ತು 31 ವಾರಂಟ್ ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಸೂಚನೆಯ ಮೇರೆಗೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಮಂಜೇಶ್ವರ ಪೊಲೀಸರು ದಾಖಲಿಸಿರುವ ಪ್ರಕರಣದ ಪ್ರಥಮ ಆರೋಪಿ ಹೊಸಬೆಟ್ಟು ನಿವಾಸಿ  ಬಡಾಜೆ  ಮೊಯ್ನುದ್ದೀನ್ ಸಮದ್ (33) ಎಂಬಾತನನ್ನು ಮಂಜೇಶ್ವರ ಇನ್ಸ್‌ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ಎಸ್‌ಐಗಳಾದ ಕೆ ಆರ್ ಉಮೇಶ್ ಮತ್ತು ರತೀಶ್ ಅವರನ್ನೊಳಗೊಂಡ ತಂಡ ಬಂಧಿಸಿದೆ. ಇದಲ್ಲದೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಹಿದಾಯತ್ ನಗರ ಮುಟ್ಟತ್ತೋಡಿ ನಿವಾಸಿ ಅಬ್ದುಲ್ ಲತೀಫ್ (54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಇನ್ಸ್‌ಪೆಕ್ಟರ್ ಶೈನ್ ಕೆ.ಪಿ, ಎಸ್‌.ಐ ಸಫ್ವಾನ್ ಕೆಪಿ, ಎಎಸ್‌ಐ ಶಿವನ್, ಎಸ್‌ಸಿಪಿಒ ಹರೀಶ್, ಸಿಪಿಒಗಳಾದ ಉಣ್ಣಿಕೃಷ್ಣನ್ ಮತ್ತು ನಿಖಿಲ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ತಪಾಸಣೆಯ ಸಮಯದಲ್ಲಿ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ 31 ವಾರಂಟ್ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Post a Comment

0 Comments