Ticker

6/recent/ticker-posts

Ad Code

ಅನಂತಪುರ ಕ್ಷೇತ್ರ ಜಾತ್ರೋತ್ಸವಕ್ಕೆ ಮನರಂಜಿಸಿದ ಕಾಸರಗೋಡು ರಾಗಮಾಲಿಕ ತಂಡದ ಭಕ್ತಿ ರಸಮಂಜರಿ

ಕುಂಬಳೆ : ಅನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ಕ್ಷೇತ್ರದ ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ವೇದಿಕೆಯಲ್ಲಿ 'ಪ್ರಕೃತಿ ಯುವತಂಡ ಅನಂತಪುರ' ಪ್ರಾಯೋಜಕತ್ವದಲ್ಲಿ 'ರಾಗಮಾಲಿಕ ಕಾಸರಗೋಡು' ಸಾದರಪಡಿಸಿದ ಭಕ್ತಿರಸಮಂಜರಿ ಕಾರ್ಯಕ್ರಮವು ಜನಮನ ಸೂರೆಗೊಂಡಿತು. ರಾಗಮಾಲಿಕ ತಂಡದ ಗಾಯಕರಾದ ಕಮಲಾಕ್ಷ ಮಲ್ಲ, ಪ್ರಶಾಂತ್ ಎದ್ರುತ್ತೋಡು, ಹರೀಶ್ ಕೋಳಿಯಡ್ಕ, ಲಚ್ಚು ಲಕ್ಷ್ಮಣ್ ಕಾಮನಬೈಲು ಕಣ್ಣೂರು, ಮನೀಶ್ ವಿದ್ಯಾಗಿರಿ, ಸುಚಿತ್ರ ಸುನಿಲ್ ಪಯ್ಯನ್ನೂರು, ಶ್ರೀದೇವಿ ಎ ಎಸ್ ಮುಳಿಯಾರು, ವರ್ಷ ಸೂರಂಬೈಲು, ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅನಂತಪುರ ಪದ್ಮನಾಭ ಸ್ವಾಮಿ ಕ್ಷೇತ್ರದ ಆಡಳಿತ ಸಮಿತಿ ಹಾಗೂ ಪ್ರಕೃತಿ ಯುವತಂಡ ಅನಂತಪುರದ ಸದಸ್ಯರು ರಾಗಮಾಲಿಕ ತಂಡವನ್ನು ಅಭಿನಂದಿಸಿದರು.

Post a Comment

0 Comments