Ticker

6/recent/ticker-posts

Ad Code

ಅಕ್ರಮ ಮದ್ಯ ಮಾರಾಟ ಓರ್ವನ ಬಂಧನ

 

ಬದಿಯಡ್ಕ : ಪರಿಶಿಷ್ಟ  ಉನ್ನತಿಯೊಂದನ್ನು ಕೇಂದ್ರೀಕರಿಸಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಬದಿಯಡ್ಕ ಅಬಕಾರಿ ರೇಂಜ್ ಸಹಾಯಕ ನಿರೀಕ್ಷಕ ಬಿ.ಎಂ. ಅಬ್ದುಲ್ಲಾ ಕುಂಞಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.  ಈ ಸಂದರ್ಭ ಗೋಳಿಯಡ್ಕದ ರಾಮ.ಕೆ (48) ಎಂಬವವರನ್ನು ಮಾರಾಟಕ್ಕೆ ಇರಿಸಿದ್ದ  4.5 ಲೀಟರ್ ಕೇರಳ ಮದ್ಯ ಸಹಿತ ಬಂಧಿಸಲಾಯಿತು. ಬಳಿಕ  ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು  ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಬಕಾರಿ ತಂಡ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ಮಂಜುನಾಥ ಆಳ್ವ, ಸಿಇಒಗಳಾದ ಜಿ.ಎಸ್. ಲಿಜು, ವಿನೋದ್.ಬಿ ಮತ್ತು ಮಹಿಳಾ ಸಿಇಒ ಧನ್ಯಾ ತಂಡದಲ್ಲಿದ್ದರು.

Post a Comment

0 Comments