ಪೆರ್ಲ : ಗುರು ಮತ್ತು ಗುರಿ ಎರಡೂ ಶ್ರೇಷ್ಠವಾಗಿರಬೇಕು. ಶ್ರೇಷ್ಠ ಗುರುವಿನ ಮಾರ್ಗದರ್ಶನದಲ್ಲಿ ಗುರಿ ತಲುಪಲು ಪ್ರಯತ್ನಿಸಿದರೆ ಸಾಧನೆಯ ಶಿಖರವನ್ನು ಏರಬಹುದು. ಗುರುಸ್ಮರಣೆಗಿಂತ ದೊಡ್ಡ ಸ್ಮರಣೆ ಇನ್ನೊಂದಿಲ್ಲ. ಗುರು ಭಕ್ತಿಯ ಮೂಲಕ ಸತ್ಕರ್ಮಗಳು ಸಿದ್ಧಿಸುವುದು. ಸತ್ಕರ್ಮಗಳಿಂದ ಮನ, ಮನೆ ಹಾಗೂ ಸಾಮಾಜಿಕ ಪರಿವರ್ತನೆ ಸಾಧ್ಯವಾಗುವುದು ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು. ಕಾಟುಕುಕ್ಕೆ ಸಮೀಪದ ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಟುಕುಕ್ಕೆ ಶ್ರೀ ಸುಬ್ರಾಯ ಕ್ಷೇತ್ರದ ಆಡಳಿತ ಮೊಕ್ತೇಸರ, ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೇವರ ಭಯವೇ ಜ್ಞಾನದ ಆರಂಭ ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದಾರೆ. ನಾವು ಏನೇ ಸಾಧನೆ ಮಾಡಬೇಕಿದ್ದರೂ ದೇವರ ಬಲ ಬೇಕು. ಪ್ರತಿಯೊಬ್ಬನಲ್ಲೂ ಒಂದೊಂದು ರೀತಿಯ ಆಂತರಿಕ ಶಕ್ತಿಯಿದೆ. ಆ ಶಕ್ತಿ ಏನೆಂಬುದನ್ನು ಅರಿತು ಜೀವನದಲ್ಲಿ ಮುನ್ನುಗ್ಗಬೇಕು. ಭಕ್ತಿ, ದೇವರು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ದೇವರು ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ನಿರ್ಮಲ ಮನಸ್ಸು, ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ದೇವರ ದೇವಸ್ಥಾನದ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಸೋಮಶೇಖರ್ ಜೆ. ಎಸ್, ದೇವಳದ ಆಡಳಿತ ಮೊಕೇಸರ ಆಲ್ವಾರು ರಾಮಚಂದ್ರ ನಾಯಕ್, ಎನರ್ಜಿ ಬೆಂಗಳೂರು ಗೋಪಾಲಕೃಷ್ಣ ನಾಯಕ್ ಬೆಳ್ಳಿಪ್ಪಾಡಿ, ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಅಧ್ಯಕ್ಷ ರಮೇಶ ಪ್ರಭು, ಶಶಿಕಲ ಶುಭಕರ ರಾವ್ ಸುಳ್ಯ ಭಾಗವಹಿಸಿದ್ದರು.

0 Comments