ಪೆರ್ಲ : ರಾಜ್ಯ ಕಂದಾಯ ಇಲಾಖೆಯ ನೇತೃತ್ವದಲ್ಲಿ ಕಾಂಞಂಗಾಡ್ ಮಿನಿ ಸಿವಿಲ್ ಸ್ಟೇಶನ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಪಟ್ಟೆ ವಿತರಣೆಯಲ್ಲಿ ಭಾಗವಹಿಸಿದವರ ಮೊಗದಲ್ಲಿ ವರ್ಷಗಳ ಬಳಿಕ ಸ್ವಂತ ದಾಖಲೆ ಹೊಂದಿದ ಪಟ್ಟೆ ಪಡೆದ ಸಂತೋಷ ಕಂಡು ಬಂದಿತ್ತು. ಎಣ್ಮಕಜೆ ಗ್ರಾಮ ಪಂಚಾಯತಿನ ನಡುಬೈಲು ಕೊರಗ ಉನ್ನತಿಯ 8 ಎಕರೆ ಸ್ಥಳವನ್ನು ವಿಭಾಗ ಮಾಡಿ 23 ಮಂದಿಗೆ ಸ್ಥಳದ ದಾಖಲೆ ವಿತರಿಸಲಾಯಿತು.
ಇದೇ ರೀತಿ ಎಣ್ಮಕಜೆ ಉನ್ನತಿಯ ಅರ್ಹರಿಗೂ ಪಟ್ಟೆ ವಿತರಣೆಯಲ್ಲಿ ಪರಿಗಣನೆ ನೀಡಲಾಗಿದೆ. ಇದುವರೆಗೂ ಇವರು ವಾಸಿಸುತ್ತಿದ್ದ ಸ್ಥಳದ ಅಧಿಕಾರ ಇವರ ಹಿರಿಯರ ಹೆಸರಿನಲ್ಲಿದ್ದು ಅವರು ತೀರಿಕೊಂಡ ಬಳಿಕ ಇವರ ಹೆಸರಿಗೆ ಬದಲಾಯಿಸಲಾಗದೆ, ತೀರ್ವೆ ಪಾವತಿಸದ ಹಾಗೂ ಸರಕಾರದಿಂದ ಲಭಿಸುವ ಕೆಲವೊಂದು ವ್ಯಕ್ತಿಗತ ಸವಲತ್ತುಗಳು ಲಭಿಸದೆ ಉಳಿದಿತ್ತು. ಇದನ್ನು ಮನಗಂಡು ಸ್ಥಳೀಯ ವಾರ್ಡ್ ಸದಸ್ಯೆ ಸೌದಾಬಿ ಹನೀಫ್ ನೇತೃತ್ವದಲ್ಲಿ ಸಂಬಂದಪಟ್ಟ ಇಲಾಖೆಗಳ ಗಮನ ಸೆಳೆದಿದ್ದು ಇದೀಗ ಕೊರಗ ಉನ್ನತಿಯ ನಿವಾಸಿಗಳು ಇವರಿಗೆ ಅಭಿನಂದನೆ ತಿಳಿಸಿದ್ದಾರೆ.


0 Comments