ಪೆರ್ಲ: ಪಾಂಚಜನ್ಯ ಜನಶಕ್ತಿ ವೇದಿಕೆ, ಶ್ರೀಕೃಷ್ಣ ಭಜನಾ ಸಂಘ ಪಡ್ರೆ, ವಾಣೀನಗರ ಸಂಯುಕ್ತ ಆಶ್ರಯದಲ್ಲಿ ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದಲ್ಲಿ 22ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆ.28ರಂದು ನಡೆಯಲಿವೆ. ಸಂಜೆ 4ರಿಂದ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ, 5ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ ಮತ್ತು ಖಂಡೇರಿ ಸುಬ್ರಹ್ಮಣ್ಯ ಪ್ರಸಾದ್ ಅವರಿಂದ ಕಥಾ ಪಾರಾಯಣ, ರಾತ್ರಿ 7:30ರಿಂದ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, 8ರಿಂದ ರೇವತಿ ಕುತ್ತಾಜೆ ಸಂಯೋಜನೆಯಲ್ಲಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

0 Comments