Ticker

6/recent/ticker-posts

Ad Code

ಫೆ.19 ರಿಂದ ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಸಂಘದ 36ನೇ ವಾರ್ಷಿಕೋತ್ಸವ

 

ಮುಂಡಿತ್ತಡ್ಕ : ವಿಷ್ಣುನಗರ ಶ್ರೀ ಮಹಾವಿಷ್ಣು ಭಜನಾ ಸಂಘದ 36ನೇ ವಾರ್ಷಿಕೋತ್ಸವ ಫೆ.19 ರಿಂದ ಫೆ.21ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ಫೆ. 19ಕ್ಕೆ  ಗುರುವಾರ ಸಂಜೆ 6ಕ್ಕೆ ಶ್ರೀ ಚಿದಾನಂದ ಆಳ್ವ, ಮಂಜಕೊಟ್ಟಿಗೆ (ಸ್ಥಾಪಕ ಸದಸ್ಯರು, ಶ್ರೀ ಮಹಾವಿಷ್ಣು ಭಜನಾ ಸಂಘ, ಮುಂಡಿತ್ತಡ್ಕ) ಇವರಿಂದ  ದೀಪ ಪ್ರಜ್ವಲನೆ,  ಸಂಜೆ 6.30ರಿಂದ 7.00ರ ತನಕ : ಶ್ರೀ ವಿಷ್ಣು ಮಹಿಳಾ ಭಜನಾ ಸಂಘ, ವಿಷ್ಣುನಗರ, ಮುಂಡಿತ್ತಡ್ಕ, ರಾತ್ರಿ 7.00 ರಿಂದ 8.30ರ ತನಕ : ಶ್ರೀ ಷಣ್ಮುಖ ಮಹಿಳಾ ಭಜನಾ ಸಂಘ ಮತ್ತು ಕುಣಿತ ಭಜನಾ ಸಂಘ ಷಣ್ಮುಖ ನಗರ, ಮುಗು, ಇವರಿಂದ ಭಜನಾ ಸಂಕೀರ್ತನೆ,  ರಾತ್ರಿ ಗಂಟೆ 8.30ಕ್ಕೆ : ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ಜರಗಲಿದೆ. ಫೆ.20ಕ್ಕೆ ಶುಕ್ರವಾರ ಸಂಜೆ 6ರಿಂದ 8.30ರ ತನಕ : ಕುಣಿತ ಭಜನೆ (ಶ್ರೀ ಸಂತಾನ ಗೋಪಾಲಕೃಷ್ಣ ಮಕ್ಕಳ ಕುಣಿತ ಭಜನಾ ತಂಡ ಕೃಷ್ಣನಗರ, ಕುಂಬಳೆ), ರಾತ್ರಿ ಗಂಟೆ 8.30ಕ್ಕೆ : ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಫೆ.21ಕ್ಕೆ ಪ್ರಾತಃಕಾಲ 12 ಕಾಯಿಗಳ ಗಣಪತಿ ಹೋಮ, ಬೆಳಿಗ್ಗೆ ಗಂಟೆ 9.00 ರಿಂದ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಮಧ್ಯಾಹ್ನ ಗಂಟೆ 12.30ಕ್ಕೆ : ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1.00 ರಿಂದ : ಪ್ರಸಾದ ಭೋಜನ, ಮಧ್ಯಾಹ್ನ ಗಂಟೆ 1.00 ರಿಂದ ರಾತ್ರಿ 12 ಗಂಟೆಯ ತನಕ ವಿವಿಧ ಭಜನಾ ತಂಡಗಳಿಂದ  ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Post a Comment

0 Comments