Ticker

6/recent/ticker-posts

Ad Code

ತುಳುನಾಡಿನ ಆರಾಧನಾ ಪರಂಪರೆಯಿಂದ ಸದೃಢ ಸಮಾಜ ನಿರ್ಮಾಣ : ನೆಕ್ಕಿತಪುಣಿ ಗೋಪಾಲಕೃಷ್ಣ

 


ವಿಟ್ಲ : ತುಳುನಾಡಿನ ತರವಾಡು ಮನೆಗಳ ಆರಾಧನಾ ಸಂಸ್ಕೃತಿಯಿಂದ ಸದೃಢ ಸಮಾಜ ನಿರ್ಮಾಣಕ್ಕೆ ತಳಹದಿ ಹಾಕುತ್ತಿದೆ ಮತ್ತು ಭಕ್ತಿ ಶ್ರದ್ಧೆಯ ಐಕ್ಯಮತದ ಸಮಾಜವನ್ನು ಕಟ್ಟಿಕೊಡಲು ಪ್ರೇರಕವಾಗುತ್ತದೆ ಎಂದು ಖ್ಯಾತ ತುಳು, ಕನ್ನಡ ಸಾಹಿತಿಗಳು ಮತ್ತು ನೆಕ್ಕಿತಪುಣಿ ಕರಂಬೇರ ತರವಾಡು ಮನೆಯ ಯಜಮಾನ ನೆಕ್ಕಿತಪುಣಿ ಗೋಪಾಲಕೃಷ್ಣ ಅಭಿಪ್ರಾಯಪಟ್ಟರು. 

   ಮಂಗಳೂರು ಸಮೀಪದ ವಿಟ್ಲ ಸೀಮೆಯಲ್ಲಿರುವ ಅಳಿಕೆ ನೆಕ್ಕಿತಪುಣಿ ಕರಂಬೇರ ತರವಾಡು ಮನೆಯಲ್ಲಿ ನಡೆದ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿ ತುಳುನಾಡಿನ ತರವಾಡು ಮನೆಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತಿ ಮತ್ತು ಶ್ರದ್ಧೆಯ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಹಾಗೂ ಒಗ್ಗಟ್ಟಿನ ಕುಟುಂಬಗಳನ್ನು ಬಲಪಡಿಸುವ ಕೆಲಸ ಕಾರ್ಯ ನಡೆಯುತ್ತದೆ.ಬಹುಕಾಲದ ಪರಂಪರೆ ಅನುಸರಣೆಯಿಂದ ತರವಾಡು ಮನೆಗಳು ಮುಂದಿನ ಜನಾಂಗಕ್ಕೆ ಧಾರ್ಮಿಕ ಚೈತನ್ಯ ನೀಡುತ್ತದೆ. ಆದಷ್ಟು ತರವಾಡು ಮನೆಗಳ ಆರಾಧನಾ ಕಾರ್ಯಕ್ರಮಗಳಲ್ಲಿ ಮಕ್ಕಳು ಮತ್ತು ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪಾಲಕರು ಮನಸ್ಸು ಮಾಡಬೇಕು. ಇದರಿಂದ ಭವಿಷ್ಯದ ಸುಂದರ ಸಮಾಜವನ್ನು ನಿರ್ಮಾಣ ಮಾಡಲು ಅಡಿಪಾಯ ಹಾಕಿದಂತಾಗುತ್ತದೆ. ಮತ್ತು ಆಧುನಿಕತೆಯ ಹೆಸರಿನಲ್ಲಿ ಅದಕ್ಕೆ ಇಡುತ್ತಿರುವ ಯುವ ಮನಸುಗಳನ್ನು ಧಾರ್ಮಿಕ ಶ್ರದ್ಧಾ ನಂಬಿಕೆಯ ಮೂಲಕ ಉತ್ತಮ ದಾರಿಯಲ್ಲಿ ಸಾಗಿಸುವಂತೆ ಮಾಡಿ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಲಹೆ ನೀಡಿದರು. 

   ತರವಾಡು ಮನೆಯ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಬಾಲಕೃಷ್ಣ ಎಂ.ಎಲ್ (ಚಂದಯ್ಯ) ನೆಕ್ಕಿತಪುಣಿ ಅವರು ಮಾತನಾಡಿ ಸಮಾಜದವರು ತರವಾಡು ಮನೆಗಳ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಷ್ಟು ಬಲ ಒದಗಿ ಬರುವುದಲ್ಲದೆ ಆರಾಧನಾ ಸಂಪ್ರದಾಯಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ ಎಂದು ಹೇಳಿದರು. ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ತನು ಮನ ಧನದ ಮೂಲಕ ತರವಾಡು ಮನೆಗಳಲ್ಲಿ ಉತ್ತಮ ಕಾರ್ಯಕ್ರಮಗಳ ರೂಪರೇಷೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿವೃದ್ಧಿ ಸಮಿತಿಯ ಸಂಯೋಜಕರಾದ ರಾಜೇಶ್ ನೆಕ್ಕಿತ ಪುಣಿ ಹೇಳಿದರು. 

    ಕಾರ್ಯಕ್ರಮವು ಕರಂಬೇರ ತರವಾಡಿನ ಪೂಜಾರ್ಮೆ ವಹಿಸಿದ ಅನಿಲ್ ಕುಮಾರ್, ರವಿ ಪೂಜಾರಿ, ಆನಂದ ಪೂಜಾರಿ, ರಾಜೇಶ್ ಪೂಜಾರಿ, ಸುಂದರ ಪೂಜಾರಿ ಮತ್ತು ಲೋಕೇಶ್ ಪೂಜಾರಿ ಇವರ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ  ಡಾ. ಸದಾನಂದ ಪೆರ್ಲ, ತರವಾಡು ಮನೆಯ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಸುಭಾಷ್ ಚಂದ್ರ ಪೂಜಾರಿ ಪುತ್ತೂರು, ಕಲ್ಲೇರಿ ವಿಭಾಗದ ಅಚ್ಯುತ ಮರಕ್ಕೂರು, ರಾಜೇಶ್, ಬಾಬು ಪೂಜಾರಿ ಕುರೆಮಜಲು, ರಾಮ ಪೂಜಾರಿ ಕಾಸರಗೋಡು ವೀರಪ್ಪ ಪೂಜಾರಿ ಮತ್ತಿತರರು ಇದ್ದರು. 

ತರವಾಡು ಮನೆಯಲ್ಲಿ ಬಾಲಕೃಷ್ಣ ಕಾರಂತರ ಸಮ್ಮುಖದಲ್ಲಿ ಗಣ ಹೋಮ ನಾಗಪೂಜೆ, ಬಿಂಬ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಪ್ಪ ದಾಸಯ್ಯ ಅವರು ವೆಂಕಟರಮಣ ದೇವರ ಮುಡಿಪು ಶುದ್ದಿ ಹಾಗೂ ಹರಿಸೇವೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Post a Comment

0 Comments