Ticker

6/recent/ticker-posts

Ad Code

ಎಣ್ಮಕಜೆ ಗ್ರಾ.ಪಂ. 2026-27ನೇ ಆರ್ಥಿಕ ಯೋಜನೆಯ ಅಭಿವೃದ್ಧಿ ವಿಚಾರ ಸಂಕಿರಣ

 


ಪೆರ್ಲ :  ಎಣ್ಮಕಜೆ ಗ್ರಾಮ ಪಂಚಾಯಿತ್   2026-27ನೇ ಸಾಲಿನ ಆರ್ಥಿಕ ಯೋಜನೆ ರೂಪಿಸುವ ಅಂಗವಾಗಿ ಅಭಿವೃದ್ಧಿ ವಿಚಾರ ಸಂಕಿರಣ ನಡೆಯಿತು.

 ಪಂಚಾಯತು ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ವಿಚಾರ ಸಂಕಿರಣವನ್ನು ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ.ಬಿ ಅಧ್ಯಕ್ಷತೆ ವಹಿಸಿದ್ದರು. ಪಂ. ಉಪಾಧ್ಯಕ್ಷ ಅಬುಬ್ಬಕ್ಕರ್ ಸಿದ್ಧಿಕ್ ವಳಮೊಗರು ,ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್. ಗ್ರಾ. ಪಂ‌.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಮ್ಲ ಇಬ್ರಾಹಿಂ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯ ಕೆ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸಹಾಯಕ ಕಾರ್ಯದರ್ಶಿ ಗಿರೀಶ್ ಟಿ.ಸ್ವಾಗತಿಸಿ ವಿನೋದ್ ಕೆ.ವಂದಿಸಿದರು.  ಬಳಿಕ  ಅಭಿವೃದ್ಧಿ ಪರ ಚರ್ಚಾಗೋಷ್ಢಿ ನಡೆಯಿತು.

Post a Comment

0 Comments