ಬದಿಯಡ್ಕ: ಹಿಂದು ಬಾಂಧವರ ಸಂಸ್ಕೃತಿ ಸಂಸ್ಕಾರ ಜಾಗೃತಿಯ ದ್ಯೇಯೋದ್ದೇಶದಿಂದ ಆಯೋಜಿಸಲ್ಪಟ್ಟ ಬದಿಯಡ್ಕದ ವಿರಾಟ್ ಹಿಂದೂ ಸಮಾಜೋತ್ಸವ ಜನ ಸಾಗರದ ಅಲೆಯಾಗಿ ಮಾರ್ದನಿಸಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಭಾನುವಾರ ಬದಿಯಡ್ಕ ಶ್ರೀ ಭಾರತೀ ನಗರ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ಕಾರ್ಯಕ್ರಮ ಉದ್ಘಾಟಿಸಿದರು.
ಸುಳ್ಯ ಕೆ.ವಿ.ಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ.ಯಶೋದ ರಾಮಚಂದ್ರ , ಭಾರತೀಯ ವಕೀಲರ ಪರಿಷತ್ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಎ.ವಿ.ಕೇಶವನ್ ದಿಕ್ಕೂಚಿ ಭಾಷಣಗೈದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಪೆರುಮುಂಡ, ವ್ಯವಸ್ಥಾಪಕ ಜಯರಾಮ ಚೆಟ್ಟಿಯಾರ್ ಬದಿಯಡ್ಕ, ಮಾತೃಸಮಿತಿ ಅಧ್ಯಕ್ಷೆ ಜಯಂತಿ ಕುಂಟಿಕಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಬಿ.ಎನ್ ಸ್ವಾಗತಿಸಿ, ಉಪಾಧ್ಯಕ್ಷ ಗಣೇಶ ಬಿ ವಂದಿಸಿದರು. ತಸ್ಮೈ ಆಚಾರ್ಯ ಮೂಕಂಪಾರೆ ಸಂಘಗೀತೆ ಹಾಡಿದರು. ವಿಘ್ನೇಶ್ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಈ ಸಂದರ್ಭದಲ್ಲಿ ಮಾತೆಯರಿಂದ ತಿರುವಾದಿರ ನೃತ್ಯ, ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಗುರುಪ್ರಸಾದ ರೈ ಕೆ. ಹಾಗೂ ನಾರಾಯಣ ವಿದ್ಯಾಗಿರಿ ಕಾರ್ಯಕ್ರಮ ನಿರೂಪಿಸಿದರು.

.jpeg)
1 Comments
ॐ ॐ ॐ ॐ 卐卐 ನಮಸ್ಕಾರ
ReplyDelete