ಫೆ.3 ಮಂಗಳವಾರ, ಚಂದ್ರಗ್ರಹಣ ಇರುವ ಕಾರಣ ದೇವಾಲಯಗಳ ಪೂಜಾ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ. ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ ಮಧ್ಯಾಹ್ನದ ಪೂಜೆ 12 ಗಂಟೆಗೂ, ರಾತ್ರಿ ಪೂಜೆ 7.30 ಗಂಟೆಗೂ ನಡೆಯಲಿದೆ.
ಮಲ್ಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7.00 ಗಂಟೆ ತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಂದು ತುಲಾಭಾರ ಸೇವೆ, ಸತ್ಯನಾರಾಯಣ ಪೂಜೆ, ಪ್ರಸಾದ ಭೋಜನ ಹಾಗು ಇನ್ನಿತರ ಸೇವೆಗಳು ಇರುವುದಿಲ್ಲ.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಮಧ್ಯಾಹ್ನ ಪೂಜೆ 11 ಗಂಟೆಗೆ ನಡೆಯಲಿದ್ದು ಬಲಿವಾಡು ಸೇವೆ, ಭೋಜನ ವ್ಯವಸ್ಥೆ ಇರುವುದಿಲ್ಲ.
ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಾಳೆ 11:30ಕ್ಕೆ ಮಧ್ಯಾಹ್ನ ಪೂಜೆ ಮತ್ತು ಸಂಜೆ 7:30ಕ್ಕೆ ರಾತ್ರಿ ಪೂಜೆ ನಡೆಯಲಿದೆ.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಾಳೆ ಮಧ್ಯಾಹ್ನದ ಪೂಜೆ 11.45 ಕ್ಕೆ ನೆರವೇರಲಿದೆ ಬಲಿವಾಡು, ಇತರ ಸೇವೆ ಇರುವುದಿಲ್ಲ.ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ರಾತ್ರಿಯ ಪೂಜಾ ಸಮಯ 8 ಗಂಟೆಗೆ ನಡೆಯಲಿದೆ,ಬಾಯಾರು ಶ್ರೀ ಪಂಚಲಿಂಗೇಶ್ವರ ದಣೆವರು ಮತ್ತು ಮಲರಾಯ ದೈವಂಗಳ ಭಂಡಾರದಲ್ಲಿ *ಬೆಳಗ್ಗಿನ ಪೂಜೆ ಎಂದಿನಂತೆಯೇ 8:00 ಕ್ಕೆಮಧ್ಯಾಹ್ನ ಪೂಜೆ 11:30 ಕ್ಕೆರಾತ್ರಿ ಪೂಜೆ 8:00 ಗಂಟೆಗೆ ಜರಗಲಿದೆ.

0 Comments