Ticker

6/recent/ticker-posts

Ad Code

ನೀರ್ಚಾಲು ಶ್ರೀ ಕುಮಾರ ಸ್ವಾಮಿ ಭಜನಾ ಮಂದಿರದ ಛಾಯಾಚಿತ್ರ ಪ್ರತಿಷ್ಠೆ ಸಂಪನ್ನ

 

ಬದಿಯಡ್ಕ : ನೀರ್ಚಾಲು ಶ್ರೀ ಕುಮಾರ ಸ್ವಾಮಿ ಭಜನಾ ಮಂದಿರದ ನವೀಕರಣ ಪುನಃಪ್ರತಿಷ್ಠೆ ಕಾರ್ಯ ಸೋಮವಾರ ಪೂರ್ವಾಹ್ನ ಜರಗಿತು. ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು, ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಂ, ಎಡನೀರು ಮಠ ಇವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಇವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶಿವಶಂಕರ ಭಟ್ ಇವರ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯ ನಡೆಯಿತು. ಇದರಂಗವಾಗಿ‌ ಬೆಳಗ್ಗೆ  ಗಣಪತಿ ಹವನ, ಪ್ರತಿಷ್ಠಾ ಹವನ, ಕಲಶ ಪೂಜೆ, ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೇವರ ಛಾಯಾಚಿತ್ರ ಪ್ರತಿಷ್ಠೆ, ಕಲಶಾಭಿಷೇಕ ನಡೆಯಿತು.

ಚಿತ್ರ : ಉದಯ ಕಂಬಾರು

Post a Comment

0 Comments