ಉಪ್ಪಳ: ಸಾರಣೆ ಕೆಲಸದ ನಡುವೆ ಕಟ್ಟಡದ ಸನ್‌ಶೇಡ್ ಮೇಲಿನಿಂದ ಬಿದ್ದು ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಅಟ್ಟೆಗೋಳಿ ನವೋದಯ ನಗರದ ಕೇಶವ - ರಮಾವತಿ ದಂಪತಿಗಳ ಪುತ್ರ ಶಂಕರ (26) ಮೃತ ಯುವಕ. ಬುಧವಾರ ಮಧ್ಯಾಹ್ನ ಮಣಿಮುಂಡದ ಉಪ್ಪಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೇಶವ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಸಂಜೆಯ ವೇಳೆಗೆ ಸಾವನ್ನಪ್ಪಿದರು.
ಮೃತರು ಸಹೋದರರಾದ ಸಂತೋಷ್, ವೇಣುಗೋಪಾಲ್, ಸಹೋದರಿ ರೇಷ್ಮಾ ಎಂಬಿವರನ್ನಗಲಿದ್ದಾರೆ. ಮಂಜೇಶ್ವರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.

0 Comments