Ticker

6/recent/ticker-posts

Ad Code

ಬಂದ್ಯೋಡಿನಲ್ಲಿ ನಿಲ್ಲಿಸಿದ್ದ ಮೀನು ಸಾಗಾಟದ ಲಾರಿ ಕಳವು

 

ಕುಂಬಳೆ :  ಬಂದ್ಯೋಡು ಸಮೀಪದ ಅಡ್ಕ  ಎಂಬ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಮೀನು ಸಾಗಿಸುತ್ತಿದ್ದ ಲಾರಿಯನ್ನು ಕದ್ದೊಯ್ಯಲಾಗಿದೆ. ಮೀನು ಮಾರಾಟ ಮಾಡಿದ  ನಂತರ ಇಲ್ಲಿ ಸುಮಾರು ಆರು ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ನಡುವೆ  ಝಿಯಾನ್ ಎಂಬ ಲಾರಿಯನ್ನು ಕದ್ದೊಯ್ದಿರುವುದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. KL11AZ2317 ವಾಹನದ GPS ಅನ್ನು ಕತ್ತರಿಸಿ ವಾಹನವನ್ನು ಕಳವುಗೈಯಲಾಗಿದೆ. ಈ ಸ್ಥಳದಲ್ಲಿ ಹಲವು ವಾಹನಗಳನ್ನು ಕಳೆದ ಹಲವು ಸಮಯದಿಂದ ನಿಲ್ಲಿಸಲಾಗುತ್ತಿತ್ತು. ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಈ  ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Post a Comment

0 Comments