ಬಾಯಾರು : ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ಬಾಯಾರು, ಬೆರಿಪದವು ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿ ಬಾಯಾರು ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಬೆರಿಪದವು ವಿದ್ಯಾರಣ್ಯ ಎ.ಎಲ್.ಪಿ ಶಾಲೆಯಲ್ಲಿ ಜರಗಿತು. ವಾರ್ಡ್ ಸದಸ್ಯರಾದ ರಾಮಕೃಷ್ಣ ಬಲ್ಲಾಳ್ ಉದ್ಘಾಟಿಸಿದರು.
ತಜ್ಞ ವೈದ್ಯರಾದ ಡಾ|| ಕೃಷ್ಣ ಮೋಹನ್ ಬಿ.ಆರ್ (BAMS), ಚಿನ್ಮಯ ಕ್ಲಿನಿಕ್, ಪೆರ್ಲ, ಡಾ|| ಸತ್ಯನಾರಾಯಣ ಬಿ (BAMS ); ಪ್ರಶಾಂತಿ ಕ್ಲಿನಿಕ್, ಬಾಯಾರು ಪದವು ರೋಗಿಗಳನ್ನು ಪರಿಶೋಧನೆ ನಡೆಸಿದರು. ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ಬಾಯಾರು ಬೆರಿಪದವು ಇದರ ಸದಸ್ಯರಾದ ದೇವಿಪ್ರಸಾದ್ ಶೆಟ್ಟಿ, ರವಿ ಬೆರಿಪದವು, ಅಶೋಕ್ ಕೊಜಪ್ಪೆ, ಕೃಷ್ಣಮೂರ್ತಿ ಶಾಂತಿ ಮೂಲೆ, ಗಜೇಂದ್ರ ಬೆರಿಪದವು ಹಾಗೂ ಸತ್ಯಸಾಯೀ ಸೇವಾ ಸಮಿತಿ ಬಾಯಾರು ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

0 Comments