Ticker

6/recent/ticker-posts

Ad Code

ಇನ್‌ಸ್ಟಾಗ್ರಾಮ್ ನಿಂದ ಯುವತಿಯರ ಫೋಟೋ ಮಾರ್ಫ್ ಮಾಡಿ ಟೆಲಿಗ್ರಾಮ್ ನಲ್ಲಿ ಹಂಚುತ್ತಿದ್ದ ಪ್ರಕರಣ ಬೆಳಕಿಗೆ : ಯುವಕನ ವಿರುದ್ದ ದೂರು

 

ಕಾಸರಗೋಡು : ಯುವತಿಯರ ಫೋಟೋಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವ ಯುವಕನೊಬ್ಬನ ವಿರುದ್ಧ  ದೂರು ದಾಖಲಾಗಿದೆ. ಯುವತಿಯೋರ್ವೆ ನೀಡಿದ ದೂರಿನ ಆಧಾರದ ಮೇಲೆ, ಕಾಸರಗೋಡು ಸೈಬರ್ ಪೊಲೀಸರು ಅಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಇರಿಯಣ್ಣಿ ನಿವಾಸಿ ಅನೂಪ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಖಾತೆಯಿಂದ 36 ಕ್ಕೂ ಹೆಚ್ಚು ಯುವತಿಯರ ಫೋಟೋಗಳನ್ನು ಮಾರ್ಫ್ ಮಾಡಿ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಷಯ ತಿಳಿದ ನಂತರ ಯುವತಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೋಲಿಸರು ತಿಳಿಸಿದರು.

Post a Comment

0 Comments