ಮಾಣಿಲ : ಕೊಡುಗೈ ದಾನಿಗಳ ಹಾಗೂ ಕ್ಷೇತ್ರ ಭಕ್ತರ ಸಹಕಾರದಲ್ಲಿ ನಿರ್ಮಿಸಿದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಒಳಾಂಗಣದ ಶಾಶ್ವತ ಚಪ್ಪರ ರವಿವಾರ ಲೋಕಾರ್ಪಣೆಗೊಂಡಿತು. ಶ್ರೀ ಕ್ಷೇತ್ರ ಕುಕ್ಕಾಜೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರಾಜೆ ದೀಪ ಪ್ರಜ್ವಲನೆ ಮೂಲಕ ಚಪ್ಪರ ಲೋಕಾರ್ಪಣೆಗೊಳಿಸಿದರು. ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ, ಕೇಶವ ಶಾಂತಿ ನರಿಕೊಂಬು ಅನುಗ್ರಹ ನುಡಿಗಳನ್ನಾಡಿದರು. ಮೊಕ್ತೇಸರ ಎಂ.ಕೆ. ಕುಕ್ಕಾಜೆ ಅಧ್ಯಕ್ಷತೆವಹಿಸಿದ್ದರು. ಕೇಪು ಓರಿಯಂಟಲ್ ಇನ್ಸೂರೆನ್ಸ್ ಬೆಂಗಳೂರು ಮ್ಯಾನೇಜರ್ ಗೋಪಾಲ ನಾಯ್ಕ ಇರಾಯಿಮೂಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಮಾಣಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಶ್ರೀ ಕಾಳಿಕಾ ಕಲಾ ಸಂಘ ಕುಕ್ಕಾಜೆ ಅಧ್ಯಕ್ಷ ವಾಸಪ್ಪ ಹಿರೇಬಂಡಾಡಿ , ಶ್ರೀ ಕಾಳಿಕಾ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಕಾಮಜಲು, ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೈವಜ್ಞ ಜಯಮೋಹನ್ ಬರೆ ಕಾಸರಗೋಡು ಹಾಗೂ ಒಳಾಂಗಣ ಚಪ್ಪರ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಎಸ್ ಎಂಪಿ ಇಂಜಿನಿಯರಿಂಗ್ ವರ್ಕ್ ನ ವಿನೀತ್ ಕಾನ ಅವರನ್ನು ಸನ್ಮಾನಿಸಲಾಯಿತು. ಚಪ್ಪರ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದವರನ್ನು ಸಭೆಯಲ್ಲಿ ಗೌರವಿಸಲಾಯಿತು. ರವಿ ಎಸ್.ಎಂ. ಕುಕ್ಕಾಜೆ ಪ್ರಾಸ್ತಾವಿಕ ಭಾಷಣಗೈದು ನಿರೂಪಿಸಿದರು. ಅಡ್ವಕೇಟ್ ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ, ಸತ್ಯ ಪ್ರಸಾದ್ ವಂದಿಸಿದರು.

0 Comments