Ticker

6/recent/ticker-posts

Ad Code

ಆತ್ಮಹತ್ಯೆಗೈದ ಜಸೀಲಾ ಕುಟುಂಬವನ್ನು ಭೇಟಿಯಾಗಿ ಸಂತೈಸಿದ ಬಿಜೆಪಿ ಜಿಲ್ಲಾ ಸಮಿತಿ

 

ಕಾಸರಗೋಡು: ಕಳ್ಳತನದ ಆರೋಪದ ಮೇಲೆ ಆತ್ಮಹತ್ಯೆ ಮಾಡಿಕೊಂಡ ಚೆಂಗಳ ಪಂಚಾಯತ್‌ನ ಆಲಂಬಾಡಿ ನಾಲ್ತಡ್ಕದ  ಜಸೀಲಾ ಅವರ ಕುಟುಂಬ ಸದಸ್ಯರನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನೀಲ್ ಮತ್ತು ಎಸ್‌ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ಸಂದರ್ಶಿಸಿ ಸಂತೈಸಿದರು.ಜಸೀಲಾ ಅವರ ಸಾವಿನ ಬಗ್ಗೆ ನಿಷ್ಪಕ್ಷಪಾತ ಮತ್ತು ಪರಿಣಾಮಕಾರಿ ತನಿಖೆ ಅಗತ್ಯವಿದೆ ಎಂದ ಅಶ್ವಿನಿ ಎಂ.ಎಲ್ ಅವರು ಕುಟುಂಬ ಸದಸ್ಯರಿಗೆ ಮತ್ತು ಜನಕೀಯ ಕ್ರಿಯಾ ಸಮಿತಿಗೆ ಬಿಜೆಪಿ ಜಿಲ್ಲಾ ಸಮಿತಿ ಎಲ್ಲಾ ಬೆಂಬಲವನ್ನು ನೀಡಲಿದೆ ಎಂದು ಸಾಂತ್ವನ‌ ನುಡಿದರು.

Post a Comment

0 Comments