Ticker

6/recent/ticker-posts

Ad Code

ಕೆ ಎಂ ಅಶ್ರಫ್ ಎಸ್‌ಡಿಪಿಐ ಅಭ್ಯರ್ಥಿಯಾಗಿ ಮಂಜೇಶ್ವರದಿಂದ ಸ್ಪರ್ಧಾ ಕಣಕ್ಕೆ


ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ  ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಕೆಎಂ ಅಶ್ರಫ್‌ಗೆ ಮತ್ತೊಬ್ಬ ಎದುರಾಳಿ ಅದೇ ಹೆಸರಿನಲ್ಲಿ ಸ್ಪರ್ಧಾ ಕಣಕ್ಕಿಳಿಯುತ್ತಿದ್ದು  ಎಸ್‌ಡಿಪಿಐ ಅಭ್ಯರ್ಥಿಯಾಗಿ ಕೆ.ಎಂ.ಅಶ್ರಫ್ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಿ.ಎ.ಸವಾದ್ ತಿಳಿಸಿದ್ದಾರೆ. ಕೆ ಎಂ ಆಶ್ರಫ್ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾಗಿದ್ದು ಸಾಮಾಜಿಕವಾಗಿ ಗುರುತಿಸಿಸಿಕೊಂಡಿರುವ ಯುವ ಸಮಾಜ ಸೇವಕ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದು, ಪ್ರಸ್ತುತ ಸ್ಪರ್ಧಿಯ ಆಗಮನವು ಪಕ್ಷದ  ಐತಿಹಾಸಿಕ ಮುನ್ನಡೆಗೆ ನಾಂದಿ ಹಾಡಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Post a Comment

0 Comments