ಉಪ್ಪಳ : ಮಂಗಲ್ಪಾಡಿ ತಾಲೂಕು ಕೇಂದ್ರ ಸರ್ಕಾರಿ ಆಸ್ಪತ್ರೆಯ ಬಳಿ ಬೃಹತ್ ಮಾದಕ ವಸ್ತು ಸಾಗಾಟದಾರರಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕುಬಣೂರು ನಿವಾಸಿ ಇಬ್ರಾಹಿಂ ಸುಹೈಲ್ (23) ಮತ್ತು ಬಂದ್ಯೋಡು, ಅಡ್ಕ ನಿವಾಸಿ ಮೊಹಮ್ಮದ್ ಅನಸುದ್ದೀನ್ (20) ಬಂಧಿತರು. ಆರೋಪಿಗಳಿಂದ 38.23 ಗ್ರಾಂ ಮಾದಕ ವಸ್ತು ಎಂಡಿಎಂಎ, 1,62,500 ರೂ. ನಗದು, ಮಾದಕ ವಸ್ತು ಕಳ್ಳಸಾಗಣೆ ಮಾಡಲು ಬಳಸಿದ ಕಾರು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾನುವಾರ ರಾತ್ರಿ 11.35 ರ ಸುಮಾರಿಗೆ ಈ ಕಾರ್ಯಾಚರಣೆ ನಡೆದಿದೆ.

0 Comments